Kerala Wayanad Landslide : ವಾಯನಾಡ (ಕೇರಳ)ನಲ್ಲಿ ಭೂಕುಸಿತ; ೮೯ ಸಾವು

೪೦೦ ಕ್ಕೂ ಹೆಚ್ಚಿನ ಜನರು ಮಣ್ಣಿನ ರಾಶಿಯಲ್ಲಿ ಸಿಲುಕಿರುವ ಸಾಧ್ಯತೆ

ವಾಯನಾಡದನಲ್ಲಿ ಭೂಕುಸಿತ

ವಾಯನಾಡ (ಕೇರಳ) – ಇಲ್ಲಿ ಧಾರಾಕಾರ ಮಳೆಯಿಂದ ಜುಲೈ ೩೦ ರ ಬೆಳಿಗ್ಗೆ ೪ ಗಂಟೆಗೆ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಭೂಕುಸಿತದಿಂದ ೮೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೧೧೬ ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ೪೦೦ ಜನರು ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಮಣ್ಣಿನ ರಾಶಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸ್ಥಳದಲ್ಲಿ ರಾಷ್ಟ್ರೀಯ ಆಪತ್ತು ಪರಿಹಾರ ತಂಡ (ಎನ್.ಡಿ.ಆರ್.ಎಫ್.), ಅಗ್ನಿಶಾಮಕ ದಳ ಮತ್ತು ಸ್ಥಳೀಯ ಸರಕಾರ ಸಹಾಯ ಕಾರ್ಯ ಮುಂದುವರೆದಿದೆ, ಹಾಗೂ ಸೈನ್ಯ ಸಹಾಯ ಪಡೆಯಲಾಗಿದೆ. ವಾಯುದಳದ ೨ ಹೆಲಿಕಾಪ್ಟರ್ ಸಹಾಯ ಮಾಡುತ್ತಿದೆ. ಸಹಾಯಕ್ಕಾಗಿ ನಿಯಂತ್ರಣ ಕಕ್ಷೆ ಕೂಡ ಸ್ಥಾಪಿಸಲಾಗಿದೆ.

೧. ವಾಯನಾಡದಲ್ಲಿನ ಮುಂಡಕ್ಕಾಯಿ, ಚುರುಮಾಲಾ, ಅಟ್ಟಾಮಾಲಾ ಮತ್ತು ನೂಲಪುಝಾ ಈ ೪ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದೆ. ೨೦೧೯ ರಲ್ಲಿ ಇದೇ ಗ್ರಾಮದಲ್ಲಿ ಅತಿವೃಷ್ಟಿಯಿಂದ ಭೂಕುಸಿತ ನಡೆದಿತ್ತು, ಅದರಲ್ಲಿ ೧೭ ಜನರು ಸಾವನ್ನಪ್ಪಿದ್ದರು ಹಾಗೂ ೫ ಜನರು ನಾಪತ್ತೆಯಾಗಿದ್ದರು.

೨. ಭೂಕುಸಿತದಿಂದ ವಾಯನಾಡದಲ್ಲಿ ಮುಂಡಕ್ಕಾಯಿ ಗ್ರಾಮದಲ್ಲಿ ಎಲ್ಲಕ್ಕಿಂತ ಹೆಚ್ಚು ಹಾನಿ ಉಂಟಾಗಿದೆ. ಇಲ್ಲಿ ೨೫೦ ಕ್ಕಿಂತಲೂ ಹೆಚ್ಚಿನ ಜನರು ಮಣ್ಣಿನ ರಾಶಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಇಲ್ಲಿ ಅನೇಕ ಮನೆಗಳು ಕೊಚ್ಚಿ ಹೋಗಿವೆ. ಇಲ್ಲಿ ೬೫ ಕುಟುಂಬಗಳು ವಾಸಿಸುತ್ತಿದ್ದವು. ಹತ್ತಿರದ ಚಹಾ ತೋಟದಲ್ಲಿನ ೩೫ ಕಾರ್ಮಿಕರು ಕೂಡ ನಾಪತ್ತೆಯಾಗಿದ್ದಾರೆ.

೩. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಈ ಘಟನೆಯ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುತ್ತಾ, ಭೂಕುಸಿತದ ಘಟನೆಯಿಂದ ನಾನು ದುಃಖಿತನಾಗಿದ್ದೇನೆ. ಯಾರು ತಮ್ಮ ಅಪ್ತರನ್ನು ಕಳೆದುಕೊಂಡಿದ್ದಾರೆ, ಅವರೊಂದಿಗೆ ನಾವು ಇದ್ದೇವೆ. ನಾವು ಗಾಯಗೊಂಡವರಿಗಾಗಿ ಪ್ರಾರ್ಥಿಸುತ್ತೇವೆ. ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದು ಹೇಳಿದ್ದಾರೆ.