ಬ್ರಿಟನ್‌ನಲ್ಲಿ ಆಡಳಿತ ನಡೆಸುತ್ತಿರುವ ಲೇಬರ್ ಪಕ್ಷವು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಹೆಚ್ಚಿನ ಒತ್ತು ನೀಡಲಿದೆ !

ಬ್ರಿಟನ್‌ನ ನೂತನವಾಗಿ ಆಯ್ಕೆಯಾದ ಹಿಂದೂ ಸಂಸದ ಜೀವನ ಸಂಧರ ಅವರ ಹೇಳಿಕೆ

ಲಂಡನ್ (ಬ್ರಿಟನ) – ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಲಾಫ್ ಬರೊ ಚುನಾವಣಾ ಕ್ಷೇತ್ರದಿಂದ ಗೆದ್ದ ಭಾರತೀಯ ಮೂಲದ ಜೀವನ ಸಂಧರ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಸಂಸದ ಸಂಧರ ಮಾತನಾಡಿ, `ನನಗೆ ಭಾರತ ಮತ್ತು ಬ್ರಿಟನ್ನಿನ ಆಡಳಿತಾರೂಢ ಲೇಬರ್ ಪಕ್ಷದ ನಡುವಿನ ಸಂಬಂಧವನ್ನು ಬಲಪಡಿಸಬೇಕಾಗಿದೆ. ಸಾರ್ವತ್ರಿಕ ಚುನಾವಣೆಯ ವಿಜಯದ ನಂತರ, ಭಾರತ ಮತ್ತು ನಮ್ಮ ದೇಶದಲ್ಲಿನ ಪ್ರವಾಸಿ ಭಾರತೀಯ ಸಮಾಜದೊಂದಿಗೆ ಸಂಬಂಧವನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ‘. ಸಂಧರ್ ಅವರು ಮೊದಲ ಬಾರಿಗೆ ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲಾಫ್ ಬರೋ ಮತಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಂಧರ ಅವರು ಇಂಗ್ಲೆಂಡಿನ ಲುಟನ್ ನಗರದಲ್ಲಿ ಜನಿಸಿದ್ದಾರೆ. ಅವರ ತಾಯಿ- ತಂದೆಯವರು ಪಂಜಾಬ್‌ನಿಂದ ಬ್ರಿಟನ್ನಿಗೆ ಬಂದಿದ್ದರು.

ಜೀವನ್ ಸಂಧರ ತಮ್ಮ ಮಾತನ್ನು ಮುಂದುವರಿಸಿ,

1. ಭಾರತ ಮತ್ತು ಬ್ರಿಟನ್ ನಡುವೆ ಮಹತ್ವದ ಪಾಲುದಾರಿಕೆ ಇದೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಕರಾರಿನ ಮೇಲೆ ಕೆಲಸ ನಡೆಯುತ್ತಿದೆ.

2. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದೊಂದಿಗೆ ನಮ್ಮ ಸಂಬಂಧ ಸುಧಾರಿಸಬೇಕು. ಇದರಿಂದ ನಮ್ಮ ಎರಡೂ ದೇಶಗಳು ಅನೇಕ ವಿಷಯಗಳನ್ನು ಸಾಧಿಸಬಹುದು. ಇದೇ ನಮ್ಮ ಇಚ್ಛೆಯಾಗಿದೆ.

3. ನಾನು ಭಾರತೀಯನಾಗಿರುವುದಕ್ಕೆ ಮತ್ತು ಬ್ರಿಟನ್‌ಗೆ ನನ್ನ ಕೊಡುಗೆಗಾಗಿ ಹೆಮ್ಮೆಪಡುತ್ತೇನೆ. ಬ್ರಿಟನ್‌ನಲ್ಲಿ ಭಾರತೀಯ ಸಂಸ್ಕೃತಿ ವ್ಯಾಪಕವಾಗಿ ಗೋಚರಿಸುತ್ತದೆ.

4. ನಾನು ಒಬ್ಬ ಅರ್ಥಶಾಸ್ತ್ರಜ್ಞನಾಗಿದ್ದು, ನನ್ನ ಕ್ಷೇತ್ರದ ಜನರ ಜೇಬಿಗೆ ಹೆಚ್ಚು ಹಣ ಹಾಕುವುದು ನನ್ನ ಕೆಲಸವಾಗಿದೆ. ಅದಕ್ಕಾಗಿಯೇ ನಾನು ಸ್ವಚ್ಛ ಊರ್ಜೆಯಲ್ಲಿ ಹೂಡಿಕೆ ಮಾಡಲು ಮತ್ತು ಲಾಫ್ ಬರೋನಲ್ಲಿ ಹಸಿರು ಸಮೃದ್ಧಿಯನ್ನು ತರಲು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.