ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದ ಅಧ್ಯಯನದ ಸಂಶೋಧನೆ
ಕ್ಯಾನ್‌ಬೆರಾ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದ ಬಾಂಡ್ ಯುನಿವರ್ಸಿಟಿಯ ಚರ್ಮಕ್ಕೆ ಸಂಬಂಧಿಸಿದ ಮುಖ್ಯ ವಿಜ್ಞಾನಿ ಡಾ. ಮೈಕೆಲ್ ಫ್ರೀಮನ್ ಅವರು, ಮೊಬೈಲ್ ನಿಂದ ಹೊರಸೂಸುವ ನೀಲಿ ಬೆಳಕು ತುಂಬಾ ಅಪಾಯಕಾರಿಯಾಗಿದ್ದು ಅದು ಚರ್ಮಕ್ಕೆ ಹಾನಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಚರ್ಮಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ ಎಂದು ಅಧ್ಯಯನದ ಮೂಲಕ ದಾವೆ ಮಾಡಿದ್ದಾರೆ.
ಅಧ್ಯಯನದಲ್ಲಿ ಗಮನಕ್ಕೆ ಬಂದ ಅಂಶ,
1. ನೀಲಿ ಬೆಳಕು ಕಣ್ಣಿಗೆ ಕಾಣುವ ಬೆಳಕಿನ ಭಾಗವಾಗಿದೆ. ಸೂರ್ಯನ ಬೆಳಕು ಇದರ ಪ್ರಬಲ ಮೂಲವಾಗಿದೆ. ಇದು ಕೆಂಪು-ಹಳದಿ ಬೆಳಕಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಮೊಬೈಲ್, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ನೀಲಿ ಬೆಳಕನ್ನು ಹೊರಸೂಸುತ್ತವೆ. ಹಾಗಾಗಿ, ಇದು 100 ರಿಂದ 1000 ಪಟ್ಟು ಕೆಳಸ್ತರದಲ್ಲಿ ಇರುತ್ತದೆ. ಈ ಸಾಧನಗಳನ್ನು ಬಳಸುವುದರಲ್ಲಿ ನಾವು ಹೆಚ್ಚು ಸಮಯ ಕಳೆಯುವುದರಿಂದ, ಈ ಬೆಳಕು ನಮ್ಮ ಆರೋಗ್ಯ, ಕಣ್ಣು ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.
2. ನೀಲಿ ಬೆಳಕಿನಿಂದ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಬಹುದು. ಇದು ನೈಸರ್ಗಿಕ ವರ್ಣದ್ರವ್ಯವಾಗಿದ್ದು, ಚರ್ಮಕ್ಕೆ ಬಣ್ಣವನ್ನು ನೀಡುತ್ತದೆ. ಇದು ಹೆಚ್ಚು ನೀಲಿ ಬೆಳಕಿನಿಂದ ಚರ್ಮ ಕಪ್ಪಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಮೆಲನಿನ್‌ನ ಅಧಿಕ ಉತ್ಪಾದನೆಯು ಚರ್ಮದ ಮೇಲೆ ಕಪ್ಪು ಕಲೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಕಪ್ಪು ಚರ್ಮ ಹೊಂದಿರುವ ಜನರಲ್ಲಿ ಕಲೆಗಳು ಬೆಳೆಯಬಹುದು.