ಬಾಂಸವಾಡಾ (ರಾಜಸ್ಥಾನ) – ರಾಜಸ್ಥಾನದಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಅವರು ಹಿಂದುಗಳಲ್ಲ ಎಂದು ಕಲಿಸುವ ಸರಕಾರಿ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಮೇನಕಾ ಡಾಮೋರ್ ಎಂದು ಈ ಶಿಕ್ಷಕಿಯ ಹೆಸರಾಗಿದೆ. ಆಕೆಯ ವಿರುದ್ಧ ‘ರಾಜಸ್ಥಾನ ಆಚಾರ ನಿಯಮ’ದ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬಾಂಸವಾಡಾದ ಮಾನಗಢ ಧಾಮದಲ್ಲಿ ಜುಲೈ ೧೯ ರಂದು ಆಯೋಜಿಸಲಾದ ಒಂದು ಸಭೆಯಲ್ಲಿ ಮೇನಕಾ ಇವರು ಬುಡಕಟ್ಟು ಜನಾಂಗದ ಮಹಿಳೆಯರಿಗೆ, ‘ಬುಡಕಟ್ಟು ಜನಾಂಗದ ಮಹಿಳೆಯರು ಕುಂಕುಮ ಹಚ್ಚುವುದಿಲ್ಲ ಹಾಗೂ ಮಂಗಳಸೂತ್ರ ಧರಿಸುವುದಿಲ್ಲ. ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಶಿಕ್ಷಣದ ಕಡೆಗೆ ಗಮನ ನೀಡಬೇಕು. ಇಂದಿನಿಂದ ಎಲ್ಲಾ ಉಪವಾಸಗಳನ್ನು ನಿಲ್ಲಿಸಿ ಎಂದು ಕರೆ ನೀಸಿಡದು. ನಾವು ಹಿಂದೂಗಳಲ್ಲ ಎಂದು ಸಹ ಹೇಳಿದರು. ಮೇನಕಾ ಇವರ ಈ ಕರೆಯ ನಂತರ ಬುಡಕಟ್ಟು ಜನಾಂಗದಲ್ಲಿನ ಮಹಿಳೆಯರು ಮೊದಲು ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅದರ ನಂತರ ಸರಕಾರದ ಶಿಕ್ಷಣ ಇಲಾಖೆಯಿಂದ ಮೇನಕಾ ಇವರ ಮೇಲೆ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಿದರು. ಮೇನಕಾ ಡಾಮೋರ್ ‘ಬುಡಕಟ್ಟು ಕುಟುಂಬ ಸಂಸ್ಥೆ’ಯ ಸಂಸ್ಥಾಪಕಿ ಆಗಿದ್ದು ಅವರು ಸಾಡದ ಸರಕಾರಿ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸಂಪಾದಕೀಯ ನಿಲುವುಇಂತಹವರಿಗೆ ಕೇವಲ ಅಮಾನತುಗೊಳಿಸದೆ, ಅವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಬೇಕು ! |