ಮಹಾಬೋಧಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲೂ ಅಂಗಡಿಕಾರರು ತಮ್ಮ ಹೆಸರಿನ ಫಲಕಗಳನ್ನು ಹಾಕಬೇಕು !

ಉಜ್ಜಯಿನಿ (ಮಧ್ಯಪ್ರದೇಶ) – ಉತ್ತರ ಪ್ರದೇಶದ ನಂತರ, ಬಿಹಾರದ ಗಯಾ ಪ್ರದೇಶದಲ್ಲಿನ ಅಂಗಡಿ ಮಾಲೀಕರು, ಹಾಗೆಯೇ ಉಜ್ಜಯಿನಿ (ಮಧ್ಯಪ್ರದೇಶ) ದಲ್ಲಿರುವ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದ ಪರಿಸರಗಳಲ್ಲಿನ ಅಂಗಡಿಯ ಬೋರ್ಡ್‌ನಲ್ಲಿ ತಮ್ಮ ಹೆಸರನ್ನು ಬರೆಯಬೇಕಾಗುತ್ತದೆ. ಇಡೀ ಮಧ್ಯಪ್ರದೇಶದಲ್ಲಿ ಇಂತಹ ಆದೇಶ ನೀಡಬೇಕು ಎಂಬ ಬೇಡಿಕೆಯೂ ವ್ಯಕ್ತವಾಗುತ್ತಿದೆ. ಜುಲೈ 20 ರಂದು, ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಷನ್ ಅಂಗಡಿ ಮಾಲೀಕರಿಗೆ ಅವರ ಅಂಗಡಿಗಳ ಹೊರಗೆ ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬೋರ್ಡ್ ಹಾಕಲು ಆದೇಶಿಸಿದೆ.

1. ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಇವರು, ಈ ಆದೇಶದ ಮೊದಲ ಬಾರಿ ಉಲ್ಲಂಘನೆಗೆ 2,000 ರೂಪಾಯಿ ಮತ್ತು ಎರಡನೇ ಬಾರಿಯ ಉಲ್ಲಂಘನೆಗೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಭದ್ರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವುದು ಈ ಆದೇಶದ ಉದ್ದೇಶವಾಗಿದೆ. ಉಜ್ಜಯಿನಿಯ ಮೇಯರ್-ಕೌನ್ಸಿಲ್ 26 ಸೆಪ್ಟೆಂಬರ್ 2002 ರಂದು ಅಂಗಡಿಯವರಿಗೆ ತಮ್ಮ ಹೆಸರನ್ನು ಪ್ರದರ್ಶಿಸಲು ಪ್ರಸ್ತಾಪವನ್ನು ಅನುಮೋದಿಸಿತ್ತು. ನಂತರ ಅದನ್ನು ಆಕ್ಷೇಪಣೆ ಮತ್ತು ಔಪಚಾರಿಕತೆಗಳಿಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಲಾಯಿತು. ಈಗ ಈ ಪ್ರಸ್ತಾವನೆ ಪ್ರಕ್ರಿಯೆ ಆರಂಭವಾಗಿದೆ. ಈ ನಿಯಮವು ‘ಆಂಪಿ ಶಾಪ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್’ ಅಥವಾ ಗುಮಾಸ್ತ ಪರ್ವಾನಾದಲ್ಲಿದೆ. ಉಜ್ಜಯಿನಿ ಒಂದು ಧಾರ್ಮಿಕ ಮತ್ತು ಪವಿತ್ರ ನಗರವಾಗಿದೆ. ಜನರು ಧಾರ್ಮಿಕ ನಂಬಿಕೆಯಿಂದ ಇಲ್ಲಿಗೆ ಬರುತ್ತಾರೆ. ಆ ಅಂಗಡಿಯವರು ಅವರು ವಸ್ತುಗಳನ್ನು ಖರೀದಿಸುವ ಅಂಗಡಿಯ ಮಾಲೀಕರ ವಿವರಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಗ್ರಾಹಕರು ಅತೃಪ್ತರಾಗಿದ್ದರೆ ಅಥವಾ ವಂಚನೆಗೆ ಒಳಗಾಗಿದ್ದರೆ, ಅಂಗಡಿಯವರನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಹೇಳಿದರು.

2. ಇಂದೋರ್‌ನ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಮುಖ್ಯಮಂತ್ರಿ ಮೋಹನ ಯಾದವ್ ಅವರಿಗೆ ಪತ್ರ ಬರೆದು ಇಡೀ ರಾಜ್ಯದಲ್ಲಿ ಈ ಆದೇಶವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಅವರು, ಹೆಸರು ಕೇಳುವುದು ಗ್ರಾಹಕರ ಹಕ್ಕಾಗಿದ್ದೂ ಅಂಗಡಿಯವರು ಹೆಸರು ಹೇಳಲು ನಾಚಿಕೆ ಪಡಬಾರದು ಎಂದರು. ರಾಜ್ಯದಲ್ಲಿರುವ ಅಂಗಡಿಗಳ ಹೊರಗೆ ಅಂಗಡಿಕಾರರ ಹೆಸರನ್ನು ಬರೆಯಬೇಕು. ಇದರಿಂದ ವೃತ್ತಿಪರರನ್ನು ಗುರುತಿಸಬಹುದು ಎಂದು ಹೇಳಿದರು.

ಗಯಾದಲ್ಲಿ ಅಂಗಡಿಯವರು ತಾವಾಗಿಯೇ ನಾಮಫಲಕ ಬರೆಯತೊಡಗಿದರು !

ಬಿಹಾರದ ಗಯಾದ ಮಹಾಬೋಧಿ ದೇವಸ್ಥಾನದ ಪ್ರದೇಶದಲ್ಲಿನ ಅಂಗಡಿಕಾರರು ತಮ್ಮ ಹೆಸರನ್ನು ಬೋರ್ಡ್‌ಗಳಲ್ಲಿ ಬರೆಯಲು ಪ್ರಾರಂಭಿಸಿದ್ದಾರೆ. ಶ್ರಾವಣ ಮಾಸದಲ್ಲಿ ಕಾವಾಡ ಯಾತ್ರಿಕರು ಮಹಾಬೋಧಿ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಜಲಾಭಿಷೇಕ ಮಾಡುತ್ತಾರೆ. ಹಿಂದೂ ಮತ್ತು ಮುಸ್ಲಿಂ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ಹಣ್ಣಿನ ಅಂಗಡಿಗಳ ಮುಂದೆ ತಮ್ಮದೇ ಹೆಸರಿನ ಫಲಕಗಳನ್ನು ಹಾಕಿದ್ದಾರೆ. ಇಲ್ಲಿನ ಕೆಲವು ಹಣ್ಣು ಮಾರಾಟಗಾರರು ಕಳೆದ 20 ವರ್ಷಗಳಿಂದ ತಮ್ಮ ಅಂಗಡಿಗಳಲ್ಲಿ ತಮ್ಮದೇ ಹೆಸರನ್ನು ಬರೆದುಕೊಂಡಿದ್ದಾರೆ. ಇದರಿಂದ ವ್ಯಾಪಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುತ್ತಾರೆ.
ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚ್ಚೌಲ್ ಅವರು, ಉತ್ತರ ಪ್ರದೇಶದಂತಹ ನಿರ್ಧಾರವನ್ನು ಇಲ್ಲಿ ಜಾರಿಗೆ ತಂದರೆ ಎಲ್ಲಾ ಸಂಘರ್ಷಗಳು ಕೊನೆಗೊಳ್ಳುತ್ತವೆ. ಪ್ರಯಾಣಿಕರು ಅವರ ಇಚ್ಛೆಯಂತೆ ಅವರ ಆಯ್ಕೆಯ ಅಂಗಡಿಗಳಿಗೆ ಹೋಗುತ್ತಾರೆ. ಇದು ಭವಿಷ್ಯದ ವಿವಾದಗಳನ್ನು ತಪ್ಪಿಸುತ್ತದೆ. ಕವಾಡ ಯಾತ್ರಿಕರು ತೊಂದರೆಯಿಂದ ಪಾರಾಗುತ್ತಾರೆ ಎಂದು ಹೇಳಿದರು.