Muslims Accept Hinduism: ಮಧ್ಯಪ್ರದೇಶದಲ್ಲಿ 14 ಮುಸ್ಲಿಮರಿಂದ ಹಿಂದೂ ಧರ್ಮ ಸ್ವೀಕಾರ !

ಜೂನ್ ನಲ್ಲಿ 30, ಏಪ್ರಿಲ್ ನಲ್ಲಿ 8 ಮುಸ್ಲಿಮರೂ ಹಿಂದೂಗಳಾದರು !

ಇಂದೋರ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಖಜ್ರಾನಾ ದೇವಸ್ಥಾನದಲ್ಲಿ 14 ಮುಸ್ಲಿಮರು ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ದೇವಸ್ಥಾನದಲ್ಲಿ ಸಂಪೂರ್ಣ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು. ಅವರು ಹಿಂದೂ ಧರ್ಮ ಸ್ವೀಕರಿಸಿದ ಬಳಿಕ ಸಂತಸ ವ್ಯಕ್ತಪಡಿಸಿದರು. ಶಾಜಿಯಾ ಹಶ್ಮಿಯಿಂದ ಸಪ್ನಾ ಆದ ಬಾಲಕಿಯು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆಕೆ ಯಾರ ಒತ್ತಡಕ್ಕೂ ಮಣಿಯದೆ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ. ಹಿಂದೂ ಧರ್ಮವನ್ನು ತುಂಬಾ ಇಷ್ಟವಾಗುತ್ತದೆ; ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಲಿಯಾ ಎಂಬ ಮತ್ತೊಬ್ಬ ಬಾಲಕಿ ಕೂಡ ಹಿಂದೂ ಧರ್ಮಕ್ಕೆ ಬಂದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾಳೆ. ಈ ಕಾರ್ಯಕ್ರಮವನ್ನು

ವಿಶ್ವ ಹಿಂದೂ ಪರಿಷತ್ ಮುಖಂಡ ಸಂತೋಷ ಕುಮಾರ ಶರ್ಮಾ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಜೂನ್‌ನಲ್ಲಿ ಖಜ್ರಾನಾ ದೇವಸ್ಥಾನದಲ್ಲಿ 30 ಮುಸ್ಲಿಮರು ಮತ್ತು ಏಪ್ರಿಲ್‌ನಲ್ಲಿ 8 ಮುಸ್ಲಿಮರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂದು ಶರ್ಮಾ ಇವರು ಮಾಹಿತಿ ನೀಡಿದರು. ಹಿಂದೂ ಧರ್ಮಕ್ಕೆ ಮರಳಿದ ಈ ಜನರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ, ಅವರು ಮುಸ್ಲಿಂ ಸಮಾಜದಲ್ಲಿ ವಿವಿಧ ರೀತಿಯ ದುಶ್ಚಟಗಳಿಂದ ಬಳಲುತ್ತಿದ್ದರು ಎಂದು ಹೇಳಿದರು.