ಬರ್ಲಿನ್ (ಜರ್ಮನಿ) – ಜರ್ಮನಿಯಲ್ಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಜರ್ಮನ್ ಸರಕಾರವು ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಜರ್ಮನಿಯ ಕಾರ್ಮಿಕ ಸಚಿವ ಹ್ಯೂಬರ್ಟ್ಸ್ ಹೆಲ್ ಅವರು ಈ ನಿಟ್ಟಿನಲ್ಲಿ ಸರಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡುವಾಗ, ನುರಿತ ಕಾರ್ಮಿಕರ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಈ ಹೊಸ ಯೋಜನೆಯಡಿ, ಜರ್ಮನಿಯು ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುಶಲ ಕಾರ್ಮಿಕರನ್ನು ನೇಮಿಸಿಕೊಳ್ಳಲಿದೆ. ಅದಕ್ಕಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
1. ಜರ್ಮನಿಯಲ್ಲಿ 70ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆಯಿದೆ. ಜರ್ಮನಿಯಲ್ಲಿ, ಭವಿಷ್ಯದಲ್ಲಿ ನುರಿತ ಕೆಲಸಗಾರರಿಗೆ ಬಾಗಿಲು ತೆರೆದಿರುತ್ತದೆ. ಜರ್ಮನಿಗೆ 2035 ರ ತನಕ 70 ಲಕ್ಷ ಕಾರ್ಮಿಕರ ಅಗತ್ಯವಿದೆ.
2. ಸಾರಿಗೆ, ಉತ್ಪಾದನೆ, ಕಟ್ಟಡನಿರ್ಮಾಣ, ಆರೋಗ್ಯ ಸೇವೆ, ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚು ಕಾರ್ಮಿಕರ ಆವಶ್ಯಕತೆ ಇದೆ.
3. ಕಾರ್ಮಿಕರಿಗಾಗಿ ಹೆಚ್ಚು ಆಕರ್ಷಕ ಯೋಜನೆಗಳನ್ನು ರೂಪಿಸುವುದಕ್ಕಾಗಿ ಜರ್ಮನ್ ಸರಕಾರವು ಅನೇಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮಾಡಿದೆ ಎಂದು ಹೇಳಿದರು.