ಮೊಹರಂ ಮೆರವಣಿಗೆಯಲ್ಲಿ ಡೋಲು ಬಾರಿಸಲು ಮದ್ರಾಸ್ ಹೈಕೋರ್ಟ್‌ನಿಂದ ಅನುಮತಿ !

ಸಾಂಪ್ರದಾಯಿಕ ಪದ್ಧತಿಯಿಂದ ಮೊಹರಂ ಆಚರಣೆಗೆ ವಿರೋಧಿಸಿರುವ ‘ತೌಹಿದ್ ಜಮಾತ್’ ಸಂಘಟನೆಗೆ ನ್ಯಾಯಾಲಯದಿಂದ ಛೀಮಾರಿ !

ಚೆನ್ನೈ (ತಮಿಳುನಾಡು) – ಮದ್ರಾಸ್ ಹೈಕೋರ್ಟ್ ರಾಜ್ಯದಲ್ಲಿನ ತಿರುನೇಲವೇಲಿ ಜಿಲ್ಲೆಯ ಇರಾವಡ್ಡಿಯಲ್ಲಿನ ಒಂದು ಪ್ರಕರಣದ ಕುರಿತು ಮಹತ್ವಪೂರ್ಣ ತೀರ್ಪು ನೀಡಿದೆ. ಜುಲೈ ೧೬ ರಂದು ನೀಡಿರುವ ಈ ತೀರ್ಪಿನ ಪ್ರಕಾರ, ಜುಲೈ ೧೭ ರಂದು ಮೊಹರಂನಲ್ಲಿ ಡೋಲು, ಸಂಗೀತ ಮತ್ತು ಕುಥಿರಾಯಿ ಪಂಚ (ರಥಯಾತ್ರೆ) ಇದನ್ನು ಸೇರಿಸಲು ಅನುಮತಿ ನೀಡಿದೆ. ಮೊಹರಂನಲ್ಲಿ ಡೋಲು ಸಂಗೀತ ಮುಂತಾದವುಗಳನ್ನು ಸೇರಿಸಲು ‘ತೌಹಿದ್ ಜಮಾತ್’ ಈ ಸಂಘಟನೆ ವಿರೋಧಿಸಿತ್ತು. ಈ ಸಂಘಟನೆಯ ವಿರುದ್ಧ ಮುಸಲ್ಮಾನರು ಉಚ್ಚ ನ್ಯಾಯಾಲಯದಲ್ಲಿ ಮೊರೆ ಹೋಗಿದ್ದು. ಆಗ ನ್ಯಾಯಾಲಯವು ಮೇಲಿನ ತೀರ್ಪು ನೀಡಿದೆ.

ನ್ಯಾಯಾಲಯವು, ಸಾಂಪ್ರದಾಯಿಕವಾಗಿ ಉತ್ಸವ ಆಚರಿಸುವುದರ ಕುರಿತು ಆಕ್ಷೇಪಿಸುವ ಕಟ್ಟರವಾದಿ ಮುಸಲ್ಮಾನರು ಮನೆಯಲ್ಲಿಯೇ ಕುಳಿತುಕೊಳ್ಳಿ. ಕಟ್ಟರವಾದಿ ಶಕ್ತಿಯಗಿಂತಲೂ ಮೂಲಭೂತ ಅಧಿಕಾರಕ್ಕೆ ಆದ್ಯತೆ ನೀಡಬೇಕು ಹೀಗೂ ಕೂಡ ಈ ಸಮಯದಲ್ಲಿ ಹೇಳಿತು.

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಇವರು ವಿಚಾರಣೆಯ ಸಮಯದಲ್ಲಿ,

೧. ಸಂವಿಧಾನದ ಕಲಂ ೧೯(೧)(ಬ) ಮತ್ತು (ಡ) ಪ್ರಕಾರ ಧಾರ್ಮಿಕ ಮೆರವಣಿಗೆ ನಡೆಸುವ ಅಧಿಕಾರವಿದೆ. ಆದ್ದರಿಂದ ‘ತೌಹಿದ್ ಜಮಾತ್’ ಈ ಸಂಘಟನೆಯು ‘ಮುಸಲ್ಮಾನ ಜನಾಂಗದಲ್ಲಿನ ಇತರ ಜನರು ಹೇಗೆ ವರ್ತಿಸಬೇಕು ? ಅಥವಾ ಹಬ್ಬ ಹೇಗೆ ಆಚರಿಸಬೇಕು ? ಇದನ್ನು ಹೇಳುವ ಅಧಿಕಾರವಿಲ್ಲ.

೨. ಕಟ್ಟರವಾದಿ ತತ್ವಗಳಿಂದ ನೀಡಿರುವ ಬೆದರಿಕೆಗಳಿಗೆ ಜಿಲ್ಲಾ ಆಡಳಿತ ಬಲಿಯಾಗುವುದು ದುರಾದೃಷ್ಟಕರವಾಗಿದೆ. ಯಾರಾದರ ಮೂಲಭೂತ ಅಧಿಕಾರ ಅಪಾಯಕ್ಕೆ ಸಿಲುಕಿದರೆ, ಆಗ ಅದು ಅಧಿಕಾರ ಕಾಪಾಡುವುದು ಮತ್ತು ಅಧಿಕಾರದ ಉಪಯೋಗದಲ್ಲಿ ಅಡಚಣೆ ತರುವವರಿಗೆ ದಂಡಿಸುವುದು ಇದು ಸರಕಾರದ ಕರ್ತವ್ಯವಾಗಿದೆ.

೩. ಮೂಲತತ್ವವಾದಿ ಶಕ್ತಿಗಿಂತಲೂ ಮೂಲಭೂತ ಅಧಿಕಾರಕ್ಕೆ ಆದ್ಯತೆ ನೀಡಬೇಕು. ಕಾನೂನು ಮತ್ತು ಸುವ್ಯವಸ್ಥೆಯ ಅಂಶಗಳನ್ನು ಹೇಳಿ ಅಧಿಕಾರದ ಉಪಯೋಗ ತಡೆಯುವದು ಸುಲಭ ಮತ್ತು ಆಲಸ್ಯಮಯ ಪರ್ಯಾಯ ಜಿಲ್ಲಾ ಆಡಳಿತ ಸ್ವೀಕರಿಸಿದೆರೇ ಅದರಿಂದ ಅವರ ನಪುಂಸಕತೆ ಕಾಣುತ್ತದೆ. (ಎಲ್ಲೆಡೆ ಹಿಂದೂ ವಿರೋಧಿ ಸರಕಾರಕ್ಕೆ ಇದು ಕಪಾಳಮೋಕ್ಷವಾಗಿದೆ ! – ಸಂಪಾದಕರು)

೪. ಸ್ಥಳದ ಪ್ರಕಾರ ಭಾಷೆ ಬದಲಾಗುತ್ತದೆ ಹಾಗೆಯೇ ಪದ್ಧತಿಗಳು ಕೂಡ ಬದಲಾಗುತ್ತವೆ.

೫. ಇರವಾಡಿ ಜನರ ಸಂಗೀತ, ಡೋಲು ತಮಟೆಯ ತಾಳದಲ್ಲಿ ಮತ್ತು ರಥ ಮೆರವಣಿಗೆಯ ಕುರಿತು ವಿಶ್ವಾಸ ಇದ್ದರೆ, ಆಗ ಅವರಿಂದ ಸೌದಿ ಅರೇಬಿಯಾದ ವರ್ತನೆಯ ಜೊತೆಗೆ ಹೊಂದಿಕೊಳ್ಳಲು ಅಪೇಕ್ಷಿಸುವುದು, ಇದು ತಾಲಿಬಾನಿ ಪದ್ಧತಿ ಅಲ್ಲವೇ ?

ಏನು ಈ ಪ್ರಕರಣ ?

ತಿರುನೇಲವೇಲಿ ಜಿಲ್ಲೆಯಲ್ಲಿನ ಇರವಾಡಿಯಲ್ಲಿ ಮುಸಲ್ಮಾನ ಜನರ ಒಂದು ವರ್ಗ ಹಲವಾರು ವರ್ಷಗಳಿಂದ ಡೋಲು-ತಮಟೆ ಬಾರಿಸುತ್ತಾ ಮೊಹರಂ ಮೆರವಣಿಗೆ ಸಾಂಪ್ರದಾಯಿಕವಾಗಿ ನಡೆಸುತ್ತದೆ. ಇದಕ್ಕೆ ‘ಸಂಥಾನಾಕೂಡು ಮೆರವಣಿಗೆ’ ಅಥವಾ ‘ಕುಥಿರಾಯಿ ಪಂಚ’ ಎಂದು ಹೇಳುತ್ತಾರೆ; ಆದರೆ ಈ ವರ್ಷ ಅವರಿಗೆ ‘ತೌಹಿದ್ ಜಮಾತ್’ ಈ ಸಂಘಟನೆಯು ವಿರೋಧಿಸಿತ್ತು. ಸ್ಥಳೀಯ ಆಡಳಿತ ಕೂಡ ‘ತೌಹಿದ್ ಜಮಾತಿ’ನ ವಿರೋಧಕ್ಕೆ ಬಲಿಯಾಯಿತು. ಇದರ ವಿರೋಧದಲ್ಲಿ ಸ್ಥಳಿಯ ಮುಸಲ್ಮಾನರು ಉಚ್ಚ ನ್ಯಾಯಾಲಯಕ್ಕೆ ಧಾವಿಸಿದರು. ಅದರ ಕುರಿತು ನ್ಯಾಯಾಲಯವು ‘ತೌಹಿದ್ ಜಮಾತ್’ ಹಾಗೂ ಸರಕಾರ ಇವರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಸ್ಥಳೀಯ ಮುಸಲ್ಮಾನರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಮೊಹರಂ ಆಚರಣೆ ಮಾಡಲು ಅನುಮತಿ ನೀಡಿತು.

ಸಂಪಾದಕೀಯ ನಿಲುವು

ಶಾಲೆಗಳಲ್ಲಿ ಹಿಜಾಬ್ ಧರಿಸಲು ವಿರೋಧಿಸಿರುವ ಹಿಂದುಗಳಿಗೆ ‘ತಾಲಿಬಾನಿ’ ಎಂದು ಹೇಳುವವರು ಈಗ ‘ತೌಹಿದ್ ಜಮಾತಿ’ನ ವಿರುದ್ಧ ಚ ಕಾರ ಎತ್ತುವುದಿಲ್ಲ, ಇದನ್ನು ತಿಳಿದುಕೊಳ್ಳಿ !