|
(ಮೌಲಾನಾ ಎಂದರೆ ಇಸ್ಲಾಂನ ಅಧ್ಯಯನಕಾರ)
ಬರೇಲಿ – ಇತ್ತೆಹಾದ್-ಏ-ಮಿಲ್ಲತ್ ಪರಿಷತ್ತಿನ (‘ಐ.ಎಂ.ಸಿ.’ಯ) ಅಧ್ಯಕ್ಷ ಮೌಲಾನಾ ತೌಕಿರ್ ರಝಾ ಖಾನ್ ಇವರು ಜುಲೈ ೨೧ ರಂದು ನಗರದಲ್ಲಿ ನಡೆಸುವ ಮತಾಂತರ ಮತ್ತು ಸಾಮೂಹಿಕ ವಿವಾಹ ಆಯೋಜನೆಯ ಕಾರ್ಯಕ್ರಮ ಮುಂದುಡಿದ್ದಾರೆ. ಸರಕಾರದಿಂದ ಇದರ ಬಗ್ಗೆ ಕಠಿಣ ನಿಲುವು ತಾಳಿರುವುದರಿಂದ ಪರಿಷತ್ತಿನಿಂದ ತಡರಾತ್ರಿ ಒಂದು ಸುತ್ತೂಲೆ ಹೊರಡಿಸಿ ಈ ಕಾರ್ಯಕ್ರಮ ಮುಂದುಡಿರುವ ಮಾಹಿತಿ ನೀಡಿದ್ದಾರೆ.
೧. ‘ಬರೇಲಿಯಲ್ಲಿ ೨೩ ಯುವಕ-ಯುವತಿಯರನ್ನು ಮತಾಂತರಗೊಳಿಸಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಡಲು ಇಚ್ಚಿಸಿದ್ದರು’, ಎಂದು ಮೌಲಾನಾ ತೌಕಿರ್ ರಝಾ ಖಾನ್ ಇವರು ಹೇಳಿಕೆ ನೀಡಿದ್ದರು. ಮೊದಲ ಹಂತದಲ್ಲಿ ಜುಲೈ ೨೧ ರಂದು ೫ ಜೋಡಿಗಳ ಸಾಮೂಹಿಕ ವಿವಾಹ ನಡೆಸುವುದಾಗಿ ಅವರು ಮಾಹಿತಿ ಕೂಡ ನೀಡಿದ್ದರು. ಈ ಬಗ್ಗೆ ಪರಿಷತ್ತು ನಗರ ದಂಡಾಧಿಕಾರಿಗಳ ಬಳಿ ಅನುಮತಿ ಕೇಳಿದ್ದರು.
೨. ಈ ಕಾರ್ಯಕ್ರಮದ ಮಾಹಿತಿ ದೊರೆಯುತ್ತಲೆ ಹಿಂದೂ ಸಂಘಟನೆಯು ಬಲವಾಗಿ ವಿರೋಧಿಸಿತು. ಭಾಜಪದ ರಾಷ್ಟ್ರೀಯ ಖಜಾಂಚಿ ರಾಜೇಶ್ ಅಗ್ರವಾಲ ಇವರು ಕೂಡ ತೀವ್ರವಾಗಿ ಖಂಡಿಸುತ್ತ, ‘ಸರಕಾರ ಇದರ ಕಡೆಗೆ ಗಮನ ಹರಿಸಬೇಕಿತ್ತು. ಮೌಲಾನಾ ತೌಕಿರ್ ರಾಜ ಯಾವಾಗಲೂ ಹಿಂದೂ ಹಬ್ಬಗಳ ಕುರಿತು ವಿವಾದಿತ ಹೇಳಿಕೆ ನೀಡುತ್ತಾರೆ’, ಎಂದು ಅವರು ಹೇಳಿದ್ದರು.
೩. ಅಗ್ರವಾಲ ಹಾಗೂ ಇತರ ಧರ್ಮಾಭಿಮಾನಿಗಲು ನಿಷೇಧಿಸಿದ ನಂತರ ಸರಕಾರ ಎಚ್ಚರಗೊಂಡಿದೆ ಮತ್ತು ಕಾರ್ಯಕ್ರಮದ ಆಯೋಜನೆ ಮಾಡದಿರಲು ಎಚ್ಚರಿಕೆ ನೀಡಿದೆ.
ಸಂಪಾದಕೀಯ ನಿಲುವು
|