13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆ
ಮಸ್ಕತ್ (ಓಮನ್) – ಓಮನ್‌ನ ಕಡಲ ಸುರಕ್ಷತಾ ಕೇಂದ್ರ ನೀಡಿದ ಮಾಹಿತಿಯ ಪ್ರಕಾರ, ಜುಲೈ 15 ರಂದು, ಓಮನ್ ಹತ್ತಿರದ ಸಮುದ್ರದಲ್ಲಿ ತೈಲ ಸಾಗಿಸುವ ದೊಡ್ಡ ನೌಕೆ ಮುಳುಗಿದೆ. ಇದರಲ್ಲಿ 13 ಭಾರತೀಯರು ಮತ್ತು 3 ಶ್ರೀಲಂಕಾ ಸಿಬ್ಬಂದಿಗಳಿದ್ದರು ಇವರೆಲ್ಲರೂ ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ.
ಕಡಲ ಸುರಕ್ಷತಾ ಕೇಂದ್ರ ನೀಡಿದ ಮಾಹಿತಿಯ ಪ್ರಕಾರ ‘ಪ್ರೆಸ್ಟೀಜ್ ಫಾಲ್ಕನ್’ ಹೆಸರಿನ ನೌಕೆ ದುಬೈನ ಹಮರಿಯಾ ಬಂದರಿನಿಂದ ಹೊರಟಿತ್ತು. ಅದು ಯೆಮೆನ್ ನಿನ ಏಡೆನ್ ಬಂದರಿನ ಕಡೆಗೆ ಹೋಗುತ್ತಿತ್ತು. ಈ ನೌಕೆಯು ಡುಕಮ್ ಬಂದರು ಪಟ್ಟಣದ ಹತ್ತಿರ ಆಗ್ನೇಯ-ಪೂರ್ವಕ್ಕೆ ಸುಮಾರು 46 ಕಿಮೀ ದೂರದಲ್ಲಿ ಬುಡಮೇಲಾಗಿದೆ, ಎಂದು ತಿಳಿಸಿದೆ.