India Palestine Relief Aid : ಭಾರತದಿಂದ ಈ ವರ್ಷ ಪ್ಯಾಲೆಸ್ತೀನ್‌ಗೆ 42 ಕೋಟಿ ರೂಪಾಯಿಗಳ ಸಹಾಯ !

ನವ ದೆಹಲಿ – ಭಾರತ ಸರಕಾರವು 2024 ರಲ್ಲಿ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಸಹಾಯ ಮಾಡುವುದಕ್ಕಾಗಿ ‘ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ ಏಜೆನ್ಸಿ’ಗೆ 50 ಲಕ್ಷ ಅಮೇರಿಕನ್ ಡಾಲರ್ಸ್ (42 ಕೋಟಿ ರೂಪಾಯಿ) ನೀಡುವುದೆಂದು ಘೋಷಿಸಿದೆ. ಇದರಲ್ಲಿ ಮೊದಲ ಕಂತು 25 ಲಕ್ಷ ಅಮೆರಿಕನ್ ಡಾಲರ್ ನೀಡಲಾಗಿದೆ. ಭಾರತ ಸರಕಾರವು 2023-24 ರಲ್ಲಿ ಪ್ಯಾಲೆಸ್ತೀನ್‌ಗೆ 35 ಲಕ್ಷ ಅಮೇರಿಕನ್ ಡಾಲರ್ಸನ ಸಹಾಯ ಮಾಡಿತ್ತು. ಆರ್ಥಿಕ ಸಹಾಯಕ್ಕಾಗಿ ನೀಡಿದ ಹಣವನ್ನು ನೇರವಾಗಿ ಪ್ಯಾಲೆಸ್ಟೈನ್‌ ಕೊಡಲಾಗುವುದಿಲ್ಲ, ಆದರೆ ಅದನ್ನು ವಿಶ್ವ ಸಂಸ್ಥೆಯ ಸಹಾಯ ಮತ್ತು ಕಾರ್ಯ ಸಂಸ್ಥೆಗೆ (ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿಗೆ) ತಲುಪಿಸಲಾಗುತ್ತದೆ.

ಸಂಪಾದಕೀಯ ನಿಲುವು

ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಎಷ್ಟು ಹಿಂದೂ ನಿರಾಶ್ರಿತರಿಗೆ ಸಹಾಯ ಮಾಡಿದೆ? ಇಷ್ಟೇ ಅಲ್ಲ, 35 ವರ್ಷಗಳ ಹಿಂದೆ ಕಾಶ್ಮೀರದಿಂದ ಗಡಿಪಾರಾದ ಹಿಂದೂಗಳಿಗೆ ಸರಕಾರವು ಎಷ್ಟು ಸಹಾಯ ಮಾಡಿದೆ ?, ಇದರ ಮಾಹಿತಿಯನ್ನೂ ಹೇಳಬೇಕು !