46 ವರ್ಷಗಳ ನಂತರ ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರ ತೆರೆಯಲಾಯಿತು !

ಡಿಜಿಟಲ್ ರೂಪದಲ್ಲಿ ದೇವರ ಆಭರಣಗಳನ್ನು ಕ್ಯಾಟಲಾಗ್ ಮಾಡಲು ಉಪಕ್ರಮ

ಪುರಿ (ಒಡಿಶಾ) – ವಿಶ್ವವಿಖ್ಯಾತ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜುಲೈ 14 ರಂದು ಮಧ್ಯಾಹ್ನ 1:28 ಕ್ಕೆ ತೆರೆಯಲಾಯಿತು. ಈ ಸಂದರ್ಭದಲ್ಲಿ ಸರಕಾರದ ಪ್ರತಿನಿಧಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು, ಶ್ರೀ ಗಜಪತಿ ಮಹಾರಾಜರ ಪ್ರತಿನಿಧಿಗಳು ಸೇರಿದಂತೆ 11 ಜನರು ಉಪಸ್ಥಿತರಿದ್ದರು. ಇದಕ್ಕೂ ಮೊದಲು 1978 ರಲ್ಲಿ ದೇವಾಲಯದ ರತ್ನಭಂಡಾರವನ್ನು ತೆರೆಯಲಾಗಿತ್ತು.

1. ಸರಕಾರವು ರತ್ನಭಂಡಾರದಲ್ಲಿ ಬೆಲೆಬಾಳುವ ವಸ್ತುಗಳ ಡಿಜಿಟಲ್ ಪಟ್ಟಿ ಮಾಡಲು ನಿರ್ಧರಿಸಿದೆ. ಇದರ ಅಡಿಯಲ್ಲಿ ಅವುಗಳ ತೂಕ ಮತ್ತು ವಿಧ ಇತ್ಯಾದಿ ವಿವರಗಳು ಇರುತ್ತವೆ.

2. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ಡಿ.ಬಿ. ಗಡನಾಯಕ ಇವರು, ರತ್ನ ಭಂಡಾರವನ್ನು ಎಂಜಿನಿಯರ್‌ಗಳು ಸಮೀಕ್ಷೆ ಮಾಡಲಿದ್ದಾರೆ ಎಂದು ಹೇಳಿದರು.

3. ತಿಜೋರಿಯಲ್ಲಿನ ಬೆಲೆಬಾಳುವ ವಸ್ತುಗಳ ನಿರ್ವಹಣೆಗೆ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ವಿಶ್ವನಾಥ ರಥ ಇವರು, ದೇವಸ್ಥಾನ ಆಡಳಿತ ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ ಅವರು ತಿಜೋರಿ ತೆರೆಯುವ ನೇತೃತ್ವ ವಹಿಸಿದ್ದರು ಎಂದು ಹೇಳಿದರು.

4. ಈ ಸಮಯದಲ್ಲಿ ಆಭರಣ ಇಡಲು 6 ಮರದ ತಿಜೋರಿಗಳನ್ನು ತರಲಾಯಿತು. ಪ್ರತಿಯೊಂದು ತಿಜೋರಿಯನ್ನು ಎತ್ತಲು 8-10 ಜನರು ಬೇಕಾಗಿದ್ದರು.