Lawyers Strike : ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಸಂಬೋಧಿಸಬಾರದು !

  • ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್’​ವಕೀಲರ ಮುಷ್ಕರ ಮುಂದುವರಿಕೆ

  • ನ್ಯಾಯಾಧೀಶರ ವಕೀಲರ ವರ್ತನೆಗೆ ಕಳವಳ ವ್ಯಕ್ತ !

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ‘ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್’ ಮನವಿಯಂತೆ, ಅಲಹಾಬಾದ್ ಹೈಕೋರ್ಟ್‌ನ ವಕೀಲರ ಮುಷ್ಕರ ನಡೆಯುತ್ತಿದೆ. ಬಾರ್ ಅಸೊಸಿಯೇಶನ್ ವಕೀಲರೊಂದಿಗಿನ ನ್ಯಾಯಾಧೀಶರ ವರ್ತನೆ, ನ್ಯಾಯಾಲಯದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸದಿರುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಕೀಲರ ಸಂಘವು ಕಳವಳ ವ್ಯಕ್ತಪಡಿಸಿದೆ. ಬಾರ್ ಅಸೊಸಿಯೇಶನ್ ನ ಕಾರ್ಯಕಾರಿಣಿ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಅದರಲ್ಲಿ ವಕೀಲರು ಇನ್ನು ಮುಂದೆ ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಸಂಬೋಧಿಸುವುದಿಲ್ಲ ಈ ಠರಾವು ಕೂಡ ಇತ್ತು.