ಮಂಗಳೂರು; ನಟೋರಿಯಸ್ ಮುಹಮ್ಮದ್ ಅಶ್ಫಾಕ್ ನಿಂದ ಹಿಂದೂ ಹುಡುಗಿಯನ್ನು ಅಪಹರಿಸಿ ಮತಾಂತರ !

ಮಂಗಳೂರು – ಇಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಟೋರಿಯಸ್ ಮೊಹಮ್ಮದ್ ಅಶ್ಫಾಕ್ ಹಿಂದೂ ಯುವತಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ. ಪಾಂಡೇಶ್ವರ ಠಾಣೆಯ ಪೊಲೀಸರು ಕಾಣೆಯಾದ ಬಾಲಕಿಯನ್ನು ಪತ್ತೆ ಹಚ್ಚಿದಾಗ ಘಟನೆ ಬೆಳಕಿಗೆ ಬಂದಿದೆ. ಮೊಹಮ್ಮದ್ ಅಶ್ಫಾಕ್ ವಿವಾಹಿತನಾಗಿದ್ದು, ಈತನ ವಿರುದ್ಧ ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ಸಂತ್ರಸ್ತೆಯ ತಂದೆ ಮಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಬಳಿಕ ಬಾಲಕಿಯನ್ನು ಪತ್ತೆ ಹಚ್ಚಲಾಗಿದೆ.