ಬರೇಲಿ: ಹಿಂದೂ ಧರ್ಮವನ್ನು ಸ್ವೀಕರಿಸಿದ ಮುಸ್ಲಿಂ ಯುವತಿ ; ಹಿಂದೂ ಯುವಕನೊಂದಿಗೆ ವಿವಾಹ !

ಬರೇಲಿ (ಉತ್ತರ ಪ್ರದೇಶ) – ಜೀನತ್ ಎಂಬ ಯುವತಿಯೊಬ್ಬಳು (ಹೆಸರು ಬದಲಾಯಿಸಲಾಗಿದೆ) ಹಿಂದೂ ಧರ್ಮ ಸ್ವೀಕರಿಸಿ ಮುನೇಶ್ ಕುಮಾರ್ ಎಂಬ ಹಿಂದೂ ಯುವಕನನ್ನು ವಿವಾಹವಾಗಿದ್ದಾಳೆ. ಮದುವೆಯ ನಂತರ ಜೀನತ್ ಳ ಹೆಸರನ್ನು ಸೀಮಾ ಕಶ್ಯಪ್ ಎಂದು ಬದಲಾಯಿಸಲಾಗಿದೆ. ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ವೈದಿಕ ರೀತಿಯಲ್ಲಿ ಇವರ ವಿವಾಹ ಮಾಡಲಾಯಿತು.

ಜೀನತ್ ಮುರಾದಾಬಾದ್ ನ ನಿವಾಸಿಯಾಗಿದ್ದು ಒಂದು ವರ್ಷದಿಂದ ಮುನೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಜೀನತ್ ಳ ತಂದೆಯವರ ವಿರೋಧವಿತ್ತು; ಆದರೆ ಜೀನತ್ ಮುನೇಶ್ ನನ್ನು ಮದುವೆಯಾಗಲು ಬಯಸಿದ್ದಳು. ಹಾಗಾಗಿ ಅವಳು ಸ್ವಇಚ್ಛೆಯಿಂದ ಮನೆಯಿಂದ ಹೊರಬಂದು ಅಗಸ್ತ್ಯ ಮುನಿ ಆಶ್ರಮದಲ್ಲಿ ಮುನೇಶನನ್ನು ವಿವಾಹವಾದಳು.