Jagannath Rath Yatra : ಪುರಿ: ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತದ ಪರಿಸ್ಥಿತಿ; ಓರ್ವ ಭಕ್ತನ ಸಾವು !

ನೂರಾರು ಜನರಿಗೆ ಗಾಯ !

ಪುರಿ (ಒಡಿಸ್ಸಾ) – ಜುಲೈ ೭ ರಿಂದ ವಿಶ್ವಪ್ರಸಿದ್ಧ ಭಗವಾನ್ ಜಗನ್ನಾಥನ ರಥಯಾತ್ರೆ ಆರಂಭವಾಗಿದ್ದು, ಅಂದು ಸಂಜೆ ರಥಯಾತ್ರೆಯ ಸಮಯದಲ್ಲಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿರುವುದು ವರದಿಯಾಗಿದೆ. ಬೃಹತ್ ಜನಜಂಗುಳಿಯಿಂದ ಅನೇಕ ಭಕ್ತರು ಗಾಯಗೊಂಡಿದ್ದು ಓರ್ವ ಭಕ್ತನು ಪ್ರಾಣ ಕಳೆದುಕೊಂಡಿದ್ದಾನೆ. ಗಾಯಗೊಂಡಿರುವ ಭಕ್ತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವನ್ನಪ್ಪಿರುವ ವ್ಯಕ್ತಿ ಬೇರೆ ರಾಜ್ಯದವನೆಂದು ಹೇಳಲಾಗುತ್ತಿದೆ.

ರಥಯಾತ್ರೆಗೆ ದೇಶಾದ್ಯಂತದಿಂದ ಲಕ್ಷಾಂತರ ಭಕ್ತರು ಪುರಿಯಲ್ಲಿ ಸೇರುತ್ತಾರೆ. ಜುಲೈ ೭ ರ ಸಂಜೆ ಸೇರಿದ್ದ ಜನಜಂಗುಳಿಯು ನಿಯಂತ್ರಣ ಮೀರಿದ ಕಾರಣ ಕಾಲ್ತುಳಿತ ಸಂಭವಿಸಿ ನೂರಾರು ಭಕ್ತರು ಗಾಯಗೊಂಡರು. ಶ್ರೀ ಬಲಭದ್ರನ ರಥ ಎಳೆಯುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಲಭದ್ರನ ರಥ ಎಳೆಯುವಾಗ ಸಾವಿರಾರು ಭಕ್ತರು ಸೇರಿದ್ದರು.