ಭಯೋತ್ಪಾದಕ ಚಟುವಟಿಕೆಗಳಿಗೆ ಸಂಭವನೀಯ ಬಳಕೆಯಿಂದಾಗಿ ‘ಬ್ರಾಯರ್ ಮೆಸೇಜಿಂಗ್ ಆಪ್’ಅನ್ನು ಬ್ಲಾಕ್ ಮಾಡಲಾಗಿತ್ತು !
ನವ ದೆಹಲಿ – ಜಮ್ಮು ಮತ್ತು ಕಾಶ್ಮೀರದಲ್ಲಿ ‘ಬ್ರಾಯರ್ ಮೆಸೇಜಿಂಗ್ ಆಪ್’ ಅನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ. ‘ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸರ್ಕಾರ ನೈಸರ್ಗಿಕ ನ್ಯಾಯದ ತತ್ವಗಳನ್ನು ಬದಿಗಿಡಬಹುದು’, ಎಂದು ದೆಹಲಿ ಹೈಕೋರ್ಟ್ ಹೇಳಿದೆ. ದೇಶದ ಭದ್ರತೆ ಮತ್ತು ಸಾರ್ವಭೌಮತ್ವದ ಹಿತದೃಷ್ಟಿಯಿಂದ ಉನ್ನತ ಮಟ್ಟದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಗೌಪ್ಯವಾಗಿಡಬಹುದು ಎಂದು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಹೇಳಿದ್ದಾರೆ.
1. ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಸೆಕ್ಷನ್ 69 ಎ ಅಡಿಯಲ್ಲಿ, ‘ಬ್ರಾಯರ್’ ನಿರ್ಬಂಧಿಸುವ ನಿರ್ಧಾರ ಹಿಂಪಡೆಯ ಬೇಕು, ಎಂದು ‘ಬ್ರಾಯರ್’ ಸಂಸ್ಥೆಯು ಹೈಕೋರ್ಟ್‌ಗೆ ಮೊರೆ ಹೋಗಿತ್ತು.
2. ಸರ್ಕಾರವು ನ್ಯಾಯಾಲಯಕ್ಕೆ, ಬ್ರಾಯಾರ್ ಸಾಫ್ಟ್‌ವೇರ್ ಇಂಟರ್ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಬಳಸುತ್ತಿರುವ ಶಂಕೆ ಇದೆ ಎಂದು ತಿಳಿಸಿದೆ. ಈ ಸಾಫ್ಟ್‌ವೇರ್ ಅನ್ನು ದುರುಪಯೋಗಪಡಿಸಿಕೊಳ್ಳಬಹುದು. ಹಾಗಾಗಿ, ಇದು ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಪಾಯವನ್ನು ಉಂಟುಮಾಡಬಹುದು ಎಂದು ಹೇಳಿದೆ.
3. ಈ ಪ್ರಕರಣವನ್ನು ಆಲಿಸಿದ ಹೈಕೋರ್ಟ್, ಸರ್ಕಾರ ನೀಡಿದ ಮಧ್ಯಂತರ ಆದೇಶವನ್ನು ‘ನಿರ್ಬಂಧಿಸುವ’ ನಿಯಮಗಳ ಸೆಕ್ಷನ್ 7 ರ ಅಡಿಯಲ್ಲಿ ಸ್ಥಾಪಿಸಲಾದ ಸಮಿತಿಯು ಪರಿಶೀಲಿಸಿದೆ ಎಂದು ತೀರ್ಪು ನೀಡಿದೆ. ಈ ಅಪ್ಲಿಕೇಶನ್ ಅನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮಾತ್ರ ನಿರ್ಬಂಧಿಸಲಾಗಿದೆ. ದೇಶದ ಇತರ ಎಲ್ಲಾ ಭಾಗಗಳಲ್ಲಿ ಇದನ್ನು ಬಳಸಬಹುದು ಎಂದು ಹೇಳಿದೆ.