China Builds Across Indian Border: ಪೆಂಗ್ಗಾಂಗ್ ಸರೋವರ ಬಳಿ ಚೀನಾದಿಂದ ಬಂಕರ್‌ ನಿರ್ಮಾಣ

ಸೌಜನ್ಯ : Black Sky

ಲೇಹ್ (ಲಡಾಖ್) – ಲಡಾಕ್‌ನ ಪೆಂಗಾಂಗ್ ಸರೋವರದ ಬಳಿ ಚೀನಾ ಕಟ್ಟಡ ಕಾಮಗಾರಿ ಮತ್ತು ಭೂಗತ ಬಂಕರ್‌ಗಳನ್ನು ನಿರ್ಮಿಸಿದೆ. ಅಮೆರಿಕದ ‘ಬ್ಲ್ಯಾಕ್ ಸ್ಕೈ’ ಕಂಪನಿಯ ಉಪಗ್ರಹ ತೆಗೆದ ಚಿತ್ರಗಳಿಂದ ಈ ಮಾಹಿತಿ ಹೊರಬಿದ್ದಿದೆ. ಸೇನೆಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಇತರ ವಸ್ತುಗಳಿಗೆ ಗಟ್ಟಿಮುಟ್ಟಾದ ಕಾಮಗಾರಿ ಮಾಡಿದೆ.

ಪೆಗಾಂಗ್ ಸರೋವರದ ಉತ್ತರ ಕಡಲ ತೀರದ ಸಿರಜಾಪನಲ್ಲಿ ಚೀನಾದ ಸೇನೆಯ ನೆಲೆ ಇದೆ. ಸರೋವರದ ಸುತ್ತಲೂ ನೇಮಿಸಿದ ಸೈನ್ಯದ ಇದು ಪ್ರಧಾನ ಕಚೇಟಿಯಾಗಿದೆ. ಭಾರತವು ದಾವೆ ಮಾಡಿದ ಪ್ರದೇಶದಲ್ಲೇ ಈ ನೆಲೆಯನ್ನು ಸ್ಥಾಪಿಸಲಾಗಿದೆ. ನೇರ ನಿಯಂತ್ರಣ ರೇಖೆಯಿಂದ ಇದರ ದೂರವು 5 ಕಿ.ಮೀ ಇದೆ. ಈ ನೆಲೆಯು ಗಾಲ್ವಾನ್ ಕಣಿವೆಯ ಆಗ್ನೇಯಕ್ಕೆ 120 ಕಿಮೀ ದೂರದಲ್ಲಿದೆ. 2020 ರಲ್ಲಿ ಇದೇ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಘರ್ಷಣೆ ನಡೆದಿತ್ತು. ಇದರಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರೆ, 40 ಚೀನಾ ಸೈನಿಕರು ಸಾವನ್ನಪ್ಪಿದ್ದರು.

ಸಂಪಾದಕೀಯ ನಿಲುವು

ಚೀನಾಗೆ ಭಾರತದೊಂದಿಗೆ ಯುದ್ಧ ಮಾಡಲು ಹಪಹಪಿಸುತ್ತಿದೆ ಆದ್ದರಿಂದ ಈ ರೀತಿಯ ಸಿದ್ಧತೆ ಮಾಡುತ್ತಿದೆ. ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧತೆ ಮಾಡುತ್ತಿದೆ. ಇದರಿಂದ ಭವಿಷ್ಯದಲ್ಲಿ ಯುದ್ಧಕ್ಕೆ ಕಾರಣವಾಗುವುದು ಸ್ಪಷ್ಟವಾಗಿರುವುದರಿಂದ, ಭಾರತೀಯರು ಅದಕ್ಕಾಗಿ ಸಿದ್ಧತೆಯನ್ನು ಮಾಡಬೇಕು !