ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆಗೆ ಶರಣಾದ ರೋಬೋಟ್ !

ಕೆಲಸದ ಒತ್ತಡ ತಾಳಲಾರದೆ ಮೆಟ್ಟಿಲುಗಳ ಮೇಲಿಂದ ಹಾರಿದ ರೋಬೋಟ್ !

ಸಿಯೋಲ್ (ದಕ್ಷಿಣ ಕೊರಿಯಾ) – ಅತಿಯಾದ ಕೆಲಸದ ಒತ್ತಡದಿಂದ ಬೇಸತ್ತ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಸಿಯೋಲ್ ನಲ್ಲಿ ವರದಿಯಾಗಿದೆ. ಈ ರೋಬೋಟ್ ಮೆಟ್ಟಿಲುಗಳ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಇದು ನಿಜವಾಗಿಯೂ ಆತ್ಮಹತ್ಯೆಯೋ ಅಲ್ಲವೋ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಆದರೆ ಕೆಲಸದ ಒತ್ತಡದಿಂದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವ ಇದು ವಿಶ್ವದ ಮೊದಲ ಪ್ರಕರಣವಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರೋಬೋಟ್ ನಗರಪಾಲಿಕೆಯಲ್ಲಿ ಕೆಲಸ ಮಾಡುತ್ತಿತ್ತು. ಈ ರೋಬೋಟ್ ಕಳೆದ ಒಂದು ವರ್ಷದಿಂದ ಗುಮಿ ನಗರದ ಜನರಿಗೆ ಸರ್ಕಾರಿ ಕೆಲಸದಲ್ಲಿ ಸಹಾಯ ಮಾಡುತ್ತಿತ್ತು. ಕೆಲ ದಿನಗಳ ಹಿಂದೆ ಅದು ಮೆಟ್ಟಿಲುಗಳ ಕೆಳಗೆ ನಿಷ್ಕ್ರಿಯವಾಗಿ ಬಿದ್ದಿರುವುದು ಕಂಡುಬಂದಿದೆ. ಈ ಘಟನೆಗೂ ಮುನ್ನ ರೋಬೋಟ್ ಆಚೆ-ಈಚೆ ಅಸ್ಥಿರವಾಗಿ ತಿರುಗಾಡುವುದನ್ನು ಕೆಲವರು ನೋಡಿದ್ದರು.

ಪಾಲಿಕೆ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ರೋಬೋಟ್ ನ ಬಿಡಿ ಭಾಗಗಳನ್ನು ಸಂಗ್ರಹಿಸಲಾಗಿದೆ. ಅದನ್ನು ತಯಾರಿಸಿದ ಸಂಸ್ಥೆಯ ಕಡೆಯಿಂದ ವಿಶ್ಲೇಷಣೆ ನಡೆಸಲಾಗುವುದು ಎಂದಿದ್ದಾರೆ.