Rishi Sunak Lost Britain Elections: ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಹೀನಾಯ ಸೋಲು!

ಲೇಬರ್ ಪಾರ್ಟಿಯ ಕಿರ್ ಸ್ಟಾರ್ಮರ್ ನೂತನ ಪ್ರಧಾನಿ!

ಲಂಡನ (ಬ್ರಿಟನ) – ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ (ಕನ್ಸರ್ವೇಟಿವ್ ಪಕ್ಷ) ಹುಜುರ ಪಕ್ಷ ಸೋತಿದ್ದು, ಕಾರ್ಮಿಕ ಪಕ್ಷ (ಲೇಬರ್ ಪಾರ್ಟಿ) ಭರ್ಜರಿ ಜಯವನ್ನು ಗಳಿಸಿದೆ. ಲೇಬರ್ ಪಕ್ಷವು 650 ರಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೆ, ಪ್ರಧಾನಿ ರಿಷಿ ಸುನಕ್ ಅವರ ಪಕ್ಷವು ಇಲ್ಲಿಯವರೆಗೆ ಕೇವಲ 92 ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ಭಾಜಪ 400 ಸ್ಥಾನಗಳ ಗಡಿ ದಾಟಲು ಸಾಧ್ಯವಾಗಿಲ್ಲ; ಆದರೆ ಬ್ರಿಟನನಲ್ಲಿ ಲೇಬರ ಪಕ್ಷವು 400ರ ಸಂಖ್ಯೆಯನ್ನು ದಾಟಿದೆ ಎನ್ನಲಾಗಿದೆ. ಈ ಚುನಾವಣಾ ಸೋಲನ್ನು ಒಪ್ಪಿಕೊಳ್ಳುವಾಗ ರಿಷಿ ಸುನಕ ಇವರು, ‘ನಾನು ಈ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ ಮತ್ತು ಬ್ರಿಟಿಷರು ನೀಡಿರುವ ಮಹತ್ವಪೂರ್ಣ ಸಂದೇಶವನ್ನು ಅರ್ಥಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ಲೇಬರ್ ಪಕ್ಷದ ನಾಯಕ ಕಿರ್ ಸ್ಟಾರ್ಮರ್ ಬ್ರಿಟನ್‌ನ ನೂತನ ಪ್ರಧಾನಿಯಾಗಲಿದ್ದಾರೆ. ಸ್ಟಾರ್ಮರ್ ಇವರು ಮಾತನಾಡಿ, ಈಗ ಬದಲಾವಣೆಯಾಗಲು ಪ್ರಾರಂಭವಾಗಿದೆ. ಇಂತಹ ಆದೇಶದಿಂದಾಗಿ, ನಮ್ಮ ಮೇಲೆ ದೊಡ್ಡ ಜವಾಬ್ದಾರಿಗಳು ಬಿದ್ದಿವೆ ಎಂದು ಹೇಳಿದರು.

1. ಬ್ರಿಟನ್ ನಲ್ಲಿ ಕಳೆದ 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷವಾದ ಲೇಬರ್ ಪಕ್ಷ ಈ ಎರಡು ದೊಡ್ಡ ಪಕ್ಷಗಳಾಗಿವೆ. ಅಲ್ಲಿನ ಆಡಳಿತವು ಈ ಎರಡು ಪಕ್ಷಗಳಲ್ಲಿ ಒಂದರ ಬಳಿ ಇರುತ್ತದೆ. ಅದರಲ್ಲಿಯೂ ಕನ್ಸರ್ವೇಟಿವ್ ಪಕ್ಷಕ್ಕೆ ಅಧಿಕಾರದಲ್ಲಿರಲು ಅತ್ಯಧಿಕ ಅವಕಾಶವನ್ನು ಬ್ರಿಟನ ಜನತೆಯು ನೀಡಿದೆ. ಸಧ್ಯಕ್ಕೆ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಸುನಕ ಇವರ ಬಳಿ ಮತ್ತು ಲೇಬರ ಪಕ್ಷದ ನೇತ್ರತ್ವವನ್ನು ಎಪ್ರಿಲ್ 2020 ರಿಂದ ಸ್ಟಾರ್ಮರ ಇವರು ಹೊಂದಿದ್ದಾರೆ.

2. ಸುನಕ್ ಬ್ರಿಟನ್‌ನ ಮೂರನೇ ರಾಜ ಚಾರ್ಲ್ಸ್ ಅವರಿಗೆ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ತದನಂತರ ಕಿಂಗ್ ಚಾರ್ಲ್ಸ್ ಅವರು ಸ್ಟಾರ್ಮರ್ ಅವರನ್ನು ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಸರಕಾರವನ್ನು ರಚಿಸುವಂತೆ ಹೇಳುವರು.

ಸಂಪಾದಕೀಯ ನಿಲುವು

ಭಾರತೀಯ ಮೂಲದ ಪ್ರಧಾನಿ ಎಂದೇ ಖ್ಯಾತಿ ಪಡೆದಿದ್ದ ರಿಷಿ ಸುನಕ್ ಅವರು ಬ್ರಿಟನ್‌ನಲ್ಲಿರುವ ಹಿಂದೂಗಳಿಗಾಗಿ ಏನನ್ನೂ ಮಾಡಿಲ್ಲ ಮತ್ತು ಭಾರತ ವಿರೋಧಿ ಖಲಿಸ್ತಾನಿಗಳ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಆದ್ದರಿಂದ, ಅವರ ಸೋಲಿನ ಬಗ್ಗೆ ಭಾರತೀಯರು ದುಃಖಿಸುವುದಿಲ್ಲ !