
ಇಸ್ಲಾಮಾಬಾದ್ – ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರಲ್ಲಿ ಒಬ್ಬನಾದ ಗಾಜಿ ಶಹಜಾದ್ ಎಂಬ ಭಯೋತ್ಪಾದಕ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಇತರ 19 ಕೈದಿಗಳು ಕೂಡ ಜೈಲಿನಿಂದ ಪರಾರಿಯಾಗಿದ್ದಾರೆ. ಗಾಜಿ ಶಹಜಾದ್ ನಿಷೇಧಿತ ಸಂಘಟನೆಯೊಂದರ ಸದಸ್ಯನಾಗಿದ್ದು, ಅವನನ್ನು ಭಾರತವು ‘ಮೋಸ್ಟ್ ವಾಂಟೆಡ್’ ಎಂದು ಘೋಷಿಸಿದೆ.
ಕೈದಿಗಳು ಬಂದೂಕು ತೋರಿಸಿ ಕಾರಾಗೃಹದ ಸಿಬ್ಬಂದಿಯನ್ನು ವಶಕ್ಕೆ ಪಡೆದರು ಮತ್ತು ಕೀಲಿಗಳನ್ನು ಕಿತ್ತುಕೊಂಡರು. ತಪ್ಪಿಸಿಕೊಳ್ಳಲು ಯೋಜಿಸಿದ ಕೈದಿಗಳು ಮುಖ್ಯ ದ್ವಾರದಲ್ಲಿರುವ ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದರು. ಆಗ ಕೈದಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ ಖೈಯಾಮ್ ಸಯೀದ್ ಎಂಬ ಕೈದಿಯು ಸಾವನ್ನಪ್ಪಿದನು.
ಪರಾರಿಯಾಗಿರುವ ಕೈದಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ರಿಯಾಜ್ ಮುಘಲ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕೆಲವು ಜೈಲು ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಹಾಗೂ ಇನ್ನು ಕೆಲವರನ್ನು ವಜಾಗೊಳಿಸಲಾಗಿದೆ.
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ನೇಪಾಳದಿಂದ ಭಾರತೀಯ ಕರೆನ್ಸಿ ಮೇಲಿನ ನಿಷೇಧ ಹಿಂಪಡೆ
ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿಯ ಬಾಂಗ್ಲಾದೇಶದ ರಹಸ್ಯ ಭೇಟಿಯಿಂದ ಚರ್ಚೆಗೆ ವೇಗ