Majority Become Minority : ಮತಾಂತರ ಹೀಗೆ ಮುಂದುವರೆದರೆ ಭಾರತದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುವರು ! – ಅಲಹಾಬಾದ್ ಹೈಕೋರ್ಟ್‌

  • ಅಲಹಾಬಾದ್ ಹೈಕೋರ್ಟ್‌ನ ತೀಕ್ಷ್ಣ ಅಭಿಪ್ರಾಯ

  • ಮತಾಂತರ ಮಾಡುವ ಧಾರ್ಮಿಕ ಸಮಾರಂಭಗಳ ಮೇಲೆ ನಿರ್ಬಂಧ ಹಾಕಲು ಆದೇಶ

  • ಹಿಂದೂಗಳನ್ನು ಮತಾಂತರ ಮಾಡುವ ಕ್ರೈಸ್ತರ ಜಾಮೀನು ಅರ್ಜಿ ತಿರಸ್ಕಾರ

ಲಕ್ಷ್ಮಣಪುರಿ – ಅಲಹಾಬಾದ್ ಹೈಕೋರ್ಟ್ ಮತಾಂತರ ಮೇಲೆ ಕಠಿಣ ಟೀಕೆ ಮಾಡಿದೆ. ಕೋರ್ಟ್, ”ಉತ್ತರ ಪ್ರದೇಶದಲ್ಲಿ ಅಮಾಯಕ ಬಡ ಜನರನ್ನು ದಾರಿ ತಪ್ಪಿಸಿ ಕ್ರೈಸ್ತರನ್ನಾಗಿ ಮಾಡಲಾಗುತ್ತಿದೆ. ಇದೇ ರೀತಿ ಮತಾಂತರ ನಡೆಯುತ್ತಿದ್ದರೆ, ಒಂದು ದಿನ ಭಾರತದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುವರು.’’ ನ್ಯಾಯಮೂರ್ತಿ ರೋಹಿತ್ ರಂಜನ್ ಅಗ್ರವಾಲ್ ಅವರು ಮತಾಂತರ ಮಾಡುವ ಧಾರ್ಮಿಕ ಸಮಾರಂಭಗಳ ಮೇಲೆ ತಕ್ಷಣದ ನಿರ್ಬಂಧ ಹಾಕಲು ಆದೇಶಿಸಿದರು. ‘ಇಂತಹ ಘಟನೆಗಳು ಸಂವಿಧಾನದ ವಿರುದ್ಧವಾಗಿವೆ’, ಎಂದು ಅವರು ಹೇಳಿದರು. ಕೈಲಾಸ್ ಎಂಬ ಕ್ರೈಸ್ತನು ಉತ್ತರ ಪ್ರದೇಶದ ಹಿಂದೂ ವ್ಯಕ್ತಿಯನ್ನು ಮತಾಂತರ ಮಾಡಿದ್ದನು. ಈ ಸಂಬಂಧ ಅವನನ್ನು ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಅವನ ಜಾಮೀನಿನ ವಿಚಾರಣೆ ನಡೆಯುತ್ತಿದೆ. ‘ಕೈಲಾಸ್ ಮೇಲಿನ ಆರೋಪಗಳು ಗಂಭೀರವಾಗಿವೆ. ಈ ಸಂದರ್ಭದಲ್ಲಿ ಅವನ ಜಾಮೀನು ಮನ್ನಿಸಲು ಸಾಧ್ಯವಿಲ್ಲ’, ಎಂದು ಹೇಳಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಮತಾಂತರ ಬಗ್ಗೆ ನ್ಯಾಯಾಲಯದ ಪ್ರಮುಖ ಟಿಪ್ಪಣಿಗಳು

1. ಸಂವಿಧಾನದ ವಿಧಿ 25 ಧರ್ಮಪ್ರಚಾರಕ್ಕೆ ಅನುಮತಿಸುತ್ತದೆ; ಆದರೆ ಮತಾಂತರಕ್ಕೆ ಅಲ್ಲ.

2. ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಮಾಯಕ ಬಡ ಜನರನ್ನು ದಾರಿ ತಪ್ಪಿಸಿ ಕ್ರೈಸ್ತರನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ ?

ಉತ್ತರ ಪ್ರದೇಶದ ಹಮೀರಪುರಿನ ರಾಮಕಲಿ ಪ್ರಜಾಪತಿ ಇವರು ದೂರು ನೀಡಿದ್ದರು. ಅದರಲ್ಲಿ, ”ನನ್ನ ಸಹೋದರ ಮನೋರೋಗಿ ಆಗಿದ್ದ ಕೈಲಾಸ್ ಎಂಬ ಯುವಕ ಅವನನ್ನು ಒಂದು ವಾರಕ್ಕೆ ದೆಹಲಿಗೆ ಕರೆದುಕೊಂಡು ಹೋದ. ಕೈಲಾಸ್, ನಿಮ್ಮ ಸಹೋದರನಿಗೆ ಚಿಕಿತ್ಸೆ ಮಾಡಿಸಿ ಹಿಂತಿರುಗಿಸುತ್ತೇನೆ; ಆದರೆ ಒಂದು ವಾರವಾದರೂ ಅವನು ಹಿಂದಿರುಗಲಿಲ್ಲ. ನಂತರ ಹಲವಾರು ದಿನಗಳ ನಂತರ ಕೈಲಾಸ್ ನನ್ನ ಸಹೋದರನೊಂದಿಗೆ ಹಿಂದಿರುಗಿದ. ಆಮೇಲೆ ಅವನು ನನ್ನ ಸಹೋದರನೊಂದಿಗೆ ಗ್ರಾಮದಲ್ಲಿ ಹಲವಾರು ಜನರನ್ನು ಕರೆದುಕೊಂಡು ದೆಹಲಿಗೆ ಹೋದ. ಅಲ್ಲಿಯ ಕಾರ್ಯಕ್ರಮದಲ್ಲಿ ಎಲ್ಲರು ಕ್ರೈಸ್ತ ಧರ್ಮ ಸ್ವೀಕರಿಸಿದರು. ಅದಕ್ಕಾಗಿ ಅವರಿಗೆ ಹಣ ನೀಡಲಾಗಿತ್ತು.” ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಮತಾಂತರ ಪ್ರಕರಣಗಳಲ್ಲಿ ಏರಿಕೆ !

ಉತ್ತರ ಪ್ರದೇಶದಲ್ಲಿ ಮೂಕ ಮತ್ತು ಕಿವುಡ ಮಕ್ಕಳ ಮತಾಂತರ ಮಾಡಿದ ಮೌಲಾನಾ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆ ಜಾರಿ

2 ವರ್ಷಗಳ ಹಿಂದೆ ಮೂಕ ಮತ್ತು ಕಿವುಡ ಮಕ್ಕಳ ಮತಾಂತರ ಪ್ರಕರಣ ಬೆಳಕಿಗೆ ಬಂದಿತ್ತು. ಭಯೋತ್ಪಾದಕ ವಿರೋಧಿ ದಳವು ಈ ಸಂಬಂಧ ಮೌಲಾನಾ (ಇಸ್ಲಾಮಿಕ್ ಚಿಂತಕ) ಒಮರ್ ಮತ್ತು ಜಹಾಂಗೀರ್ ನನ್ನು ಬಂಧಿಸಿತ್ತು. ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಠಿಣ ಆದೇಶಗಳನ್ನು ನೀಡಿದ್ದರು. ಅವರು, ಮತಾಂತರದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ‘ರಾಷ್ಟ್ರೀಯ ಭದ್ರತೆ ಕಾಯ್ದೆ’ ಮತ್ತು ‘ಗುಂಡಾ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಬೇಕು. ಪ್ರತಿ ಅಂಶವನ್ನು ತೀವ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಒಂದೇ ಸಲ 400 ಮಂದಿಯಿಂದ ಕ್ರೈಸ್ತರ ವಿರುದ್ಧ ದೂರು

ಅಕ್ಟೋಬರ್ 28, 2022 ರಂದು ಉತ್ತರ ಪ್ರದೇಶದ ಮೆರಠನಲ್ಲಿ ಮತಾಂತರದ ಒಂದು ದೊಡ್ಡ ಪ್ರಕರಣ ಬೆಳಕಿಗೆ ಬಂದಿತ್ತು. ಮಂಗತಾಪುರಂ ಕಾಲೊನಿಯ ಸುಮಾರು 400 ಜನರು ಪೊಲೀಸ್ ಅಧೀಕ್ಷಕರ ಕಚೇರಿಗೆ ಬಂದರು. ಇವರು ‘ನಮ್ಮನ್ನು ಕ್ರೈಸ್ತರನ್ನಾಗಿ ಮಾಡಲು ಅನಿವಾರ್ಯ ಮಾಡಲಾಗುತ್ತಿದೆ’ ಎಂದು ದೂರು ನೀಡಿದ್ದರು. ‘ಕೊರೊನಾ ಮಹಾಮಾರಿಯ ಸಮಯದಲ್ಲಿ ಲಾಕ್ಡೌನ್ ಇದ್ದಾಗ ಕೆಲವು ಕ್ರೈಸ್ತರು ಕಾಲೊನಿಯ ನಿವಾಸಿಗಳಿಗೆ ಸಹಾಯ ಮಾಡಿದ್ದರು. ಈಗ ಅವರು ಮತಾಂತರಕ್ಕಾಗಿ ಒತ್ತಡ ತಂದಿದ್ದಾರೆ. ಅವರು ಸಂಕೀರ್ಣದ ಹಿಂದೂಗಳನ್ನು ದೇವಸ್ಥಾನಕ್ಕೆ ಹೋಗಲು ಮತ್ತು ಪೂಜಿಸಲು ತಡೆಒಡ್ಡಿದ್ದಾರೆ. ಹಲವಾರು ಮನೆಗಳಿಂದ ಹಿಂದೂ ದೇವತೆಗಳ ಚಿತ್ರಗಳನ್ನು ತೆಗೆದುಹಾಕಲಾಗಿದೆ’, ಎಂದು ದೂರಿನಲ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಸಂಪಾದಕೀಯ ನಿಲುವು

  • ಹೈಕೋರ್ಟ್ ತಳೆದ ತೀಕ್ಷ್ಣ ಭೂಮಿಕೆಯು ಹಿಂದೂಗಳ ಮತಾಂತರ ತಡೆಗಟ್ಟಲಿದೆ ಎಂಬ ನಿರೀಕ್ಷೆ !
  • ಈಗ ಸರ್ಕಾರವು ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತಂದು ಹಿಂದೂಗಳಿಗೆ ಭರವಸೆ ನೀಡುವುದು ಅಗತ್ಯ !