ಪರಾತ್ಪರ ಗುರು ಡಾ. ಆಠವಲೆಯವರ ದೇವರಕೋಣೆಯಲ್ಲಿನ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರ ಮತ್ತು ಶ್ರೀ ದುರ್ಗಾದೇವಿಯ ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಪಂಚತತ್ತ್ವಗಳ ಸ್ತರದ ಪ್ರಯೋಗ ಮತ್ತು ಅವರಿಗೆ ಬಂದ ಅನುಭೂತಿಗಳು

೭ ಜುಲೈ ೨೦೨೪ ಈ ದಿನದಂದು ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವವಿದೆ. ಅದರ ನಿಮಿತ್ತ….

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನನ್ನ ಕೋಣೆಯಲ್ಲಿರುವ ದೇವರಕೋಣೆಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರವಿದ್ದು ಅದರಲ್ಲಿ ಈ ಮೊದಲು ಕಾಲಾನುಸಾರ ಅನೇಕ ಬದಲಾವಣೆಗಳು ಕಂಡು ಬಂದವು. ಆ ಛಾಯಾಚಿತ್ರದ ಚೈತನ್ಯ ಹೆಚ್ಚಾದುದರಿಂದ ಛಾಯಾಚಿತ್ರದಲ್ಲಿ ಪ.ಪೂ. ಬಾಬಾರ ಮುಖಮಂಡಲವು ತಿಳಿಹಳದಿ ಕಾಣಿಸುತ್ತಿದೆ. ಈಗ ಅವರ ತಲೆಯ ಹಿಂದಿನ ಪ್ರಭಾವಲಯ ಗಾಢ ಬಿಳಿ ಆಗಿದೆ. (ಛಾಯಾಚಿತ್ರ ‘ಆ’ ನೋಡಿರಿ.) ಮತ್ತು ಶ್ರೀ ದುರ್ಗಾದೇವಿಯ ಚಿತ್ರದಲ್ಲಿನ ದೇವಿಯ ತಲೆಯ ಹಿಂದಿನ ಪ್ರಭಾವಲಯ ಮಸುಕಾಗಿದೆ. (ಛಾಯಾಚಿತ್ರ ‘ಈ’ ನೋಡಿರಿ.) ಈ ಆಧ್ಯಾತ್ಮಿಕ ಸ್ತರದ ಬದಲಾವಣೆಯಿಂದ ಪಂಚತತ್ತ್ವ ಮತ್ತು ಪ್ರೀತಿ ಇವುಗಳ ಸ್ತರದಲ್ಲಿ ಯಾವ ಅನುಭೂತಿ ಬರುತ್ತದೆ, ಎಂಬುದರ ಬಗ್ಗೆ ನಾನು ಅಧ್ಯಯನ ಮಾಡಿದೆನು. ಅದರಲ್ಲಿ ಮುಂದಿನ ಭಾಗ ಗಮನಕ್ಕೆ ಬಂದಿತು.

ಪ.ಪೂ. ಭಕ್ತರಾಜ ಮಹಾರಾಜರ ಮೂಲ ಛಾಯಾಚಿತ್ರ
ಪರಾತ್ಪರ ಗುರು ಡಾ. ಆಠವಲೆಯವರ ದೇವರಕೋಣೆಯಲ್ಲಿನ ಆಧ್ಯಾತ್ಮಿಕ ಬದಲಾವಣೆಯಾದ ಛಾಯಾಚಿತ್ರ
ಶ್ರೀ ದುರ್ಗಾದೇವಿಯ ಮೂಲ ಚಿತ್ರ
ಪರಾತ್ಪರ ಗುರು ಡಾ. ಆಠವಲೆಯವರ ದೇವರಕೋಣೆಯಲ್ಲಿನ ಆಧ್ಯಾತ್ಮಿಕ ಬದಲಾವಣೆಯಾದ ಛಾಯಾಚಿತ್ರ

ಇದರಿಂದ, ಪ.ಪೂ. ಭಕ್ತರಾಜ ಮಹಾರಾಜರ ಕಾರ್ಯ ಪೃಥ್ವಿ, ಆಪ ಮತ್ತು ತೇಜ ಈ ತತ್ತ್ವಗಳ ಸ್ತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಮತ್ತು ಶ್ರೀ ದುರ್ಗಾದೇವಿಯ ಕಾರ್ಯ ವಾಯು ಮತ್ತು ಆಕಾಶ ಈ ತತ್ತ್ವದ ಸ್ತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದು ಗಮನಕ್ಕೆ ಬಂದಿತು. ಸ್ವಲ್ಪದರಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಕಾರ್ಯ ನನ್ನ ವ್ಯಷ್ಟಿ ಸಾಧನೆಗಾಗಿ ಇರುವುದರಿಂದ ಅದು ಸಗುಣ ಸ್ತರದ್ದಾಗಿದೆ ಮತ್ತು ಶ್ರೀ ದುರ್ಗಾದೇವಿಯ ಕಾರ್ಯ ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ನಡೆದುದರಿಂದ ಅದು ಸಗುಣ-ನಿರ್ಗುಣ ಸ್ತರದ್ದಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ (೨೧.೧.೨೦೨೨)