ಜೀವಂತ ಇರುವವರೆಗೆ ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವೆನು. ! – ನಾಮರಾಮ ರೆಡ್ಡಿ, ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ವಾನರ ಸೇನಾ. ತೆಲಂಗಾಣಾ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ (೨೮ ಜೂನ್) : ಉದ್ಬೋಧನಾ ಸತ್ರ

ದೇವಸ್ಥಾನಗಳ ರಕ್ಷಣೆಗಾಗಿ ನ್ಯಾಯಾಂಗ ಪ್ರಯತ್ನ

ನಾಮರಾಮ ರೆಡ್ಡಿ

೧೯೯೨ ರಲ್ಲಿ ‘ಐ.ಎಸ್.ಐ.’ ಈ ಪಾಕಿಸ್ತಾನದ ಗುಪ್ತಚರ ಸಂಘಟನೆಯು ನನ್ನನ್ನು ಕೊಲ್ಲಲು ೨ ಬಾರಿ ಯೋಜನೆ ಹಾಕಿತ್ತು. ನನ್ನನ್ನು ಕೊಲ್ಲಲು ಕೆಲವು ಜನರು ಬಂದಿದ್ದರು; ಆದರೆ ನಾನು ಅಲ್ಲಿ ಇರಲಿಲ್ಲ. ಆದುದರಿಂದ ನನ್ನ ಸ್ನೇಹಿತನನ್ನು ಹೊಡೆದು ಹೋದರು. ನಾನು ಯಾವಾಗಲೂ ಹೋಗುತ್ತಿದ್ದ ಸ್ಥಳಕ್ಕೆ ನನ್ನನ್ನು ಕೊಲ್ಲಲು ಬಂದಿದ್ದರು. ನನ್ನ ಮನೆಯಿಂದ ೧೫ ಕಿಲೋಮೀಟರ್ ಅಂತರದಲ್ಲಿರುವ ಒಂದು ದೇವಸ್ಥಾನವನ್ನು ಮುಸಲ್ಮಾನರು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಈ ದೇವಸ್ಥಾನಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಬಂದು ಹೋಗಿದ್ದರು. ಮಾಹಿತಿ ಅಧಿಕಾರವನ್ನು ಬಳಸಿ ನಾನು ಈ ದೇವಸ್ಥಾನದ ಭೂಮಿಯನ್ನು ಬಿಡಿಸಲು ನ್ಯಾಯಾಂಗ ಹೋರಾಟ ನಡೆಸಿದೆನು.

ಇಲ್ಲಿಯವರೆಗೆ ರಾಷ್ಟ್ರೀಯ ವಾನರ ಸೇನೆಯ ಮೂಲಕ ದೇವಸ್ಥಾನಗಳ ೩ ಸಾವಿರ ಎಕರೆ ಭೂಮಿಯನ್ನು ಮುಸಲ್ಮಾನರ ನಿಯಂತ್ರಣದಿಂದ ಬಿಡಿಸಲಾಗಿದೆ. ಈ ಕೆಲಸವನ್ನು ಮಾಡಲೆಂದೇ ಭಗವಂತನು ನನ್ನನ್ನು ಕಾಲಕಾಲಕ್ಕೆ ರಕ್ಷಿಸಿದ್ದಾನೆ. ಹನುಮಂತನು ನನ್ನ ಬೆನ್ನಿಗಿದ್ದಾನೆ. ಆದುದರಿಂದ ಇಲ್ಲಿಯವರೆಗೆ ಒಂದೇ ಒಂದು ದೇವಸ್ಥಾನದ ಮೊಕದ್ದಮೆಯನ್ನು ನಾನು ಸೋತಿಲ್ಲ. ಕಳೆದ ೧೫ ವರ್ಷಗಳಲ್ಲಿ ವಾನರ ಸೇನೆಯ ಕಾರ್ಯ ತೆಲಂಗಾಣಾದೊಂದಿಗೆ ಆಂಧ್ರಪ್ರದೇಶ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿಯೂ ಹೆಚ್ಚುತ್ತಿದೆ. ದೇವಸ್ಥಾನಗಳ ರಕ್ಷಣೆಯ ಕಾರ್ಯದಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ನನಗೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಕಾರ್ಯ ಪಾರದರ್ಶಕವಾಗಿದೆ. ಒಂದು ದೊಡ್ಡ ಮರಕ್ಕಿಂತ ಚಿಕ್ಕ-ಚಿಕ್ಕ ಅನೇಕ ಗಿಡಗಳಿದ್ದರೆ, ಹೆಚ್ಚು ಆಮ್ಲಜನಕ ಸಿಗುತ್ತದೆ. ಅದರಂತೆ ವಿವಿಧ ಸಂಘಟನೆಗಳ ಮಾಧ್ಯಮಗಳಿಂದ ಧರ್ಮಕಾರ್ಯ ಮಾಡಬೇಕು; ಆದರೆ ಎಲ್ಲರೂ ಒಟ್ಟಿಗೆ ಇರುವುದು ಮಹತ್ವದ್ದಾಗಿದೆ. ದೇವಸ್ಥಾನಗಳ ರಕ್ಷಣೆಗಾಗಿ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನುಬದ್ಧ ಹೋರಾಟಕ್ಕಾಗಿ ನಾನು ಸಹಾಯ ಮಾಡುವೆನು. ಎಲ್ಲಿಯವರೆಗೆ ಜೀವಂತವಾಗಿರುವೆನೋ, ಅಲ್ಲಿಯವರೆಗೆ ದೇವಸ್ಥಾನಗಳ ರಕ್ಷಣೆಗಾಗಿ ನಾನು ಹೋರಾಡುವೆನು.