Indian Worker Killed: ಸತನಾಮ ಸಿಂಹರವರ ಸಾವಿಗೆ ಕಾರಣರಾಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕು!

ಭಾರತದಿಂದ ಇಟಲಿ ಸರಕಾರಕ್ಕೆ ಮನವಿ

ರೋಮ್ (ಇಟಲಿ) – ಭಾರತವು ಇಟಲಿಗೆ ಭಾರತೀಯ ಪ್ರಜೆ ಸತನಾಮ ಸಿಂಹರವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಕ್ತೇಶ ಪರದೇಶಿಯವರು ಇಟಲಿಯ ವಿದೇಶಾಂಗ ಸಚಿವೆ ಲುಯಿಗಿ ಮಾರಿಯಾ ವಿಗ್ನಲಿಯವರ ಎದುರು ಈ ವಿಷಯವನ್ನು ಮಂಡಿಸಿದರು. ಸತನಾಮ ಸಿಂಹನು ಇಟಲಿಯಲ್ಲಿ ಒಂದು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅವರ ಕೈ ಕತ್ತರಿಸಲ್ಪಟ್ಟಿತ್ತು; ಆದರೆ ಮಾಲೀಕನು ಅವನನ್ನು ವೈದ್ಯಕೀಯ ಉಪಚಾರಕ್ಕಾಗಿ ಕರೆದೊಯ್ಯುವ ಬದಲು ರಸ್ತೆಯ ಬದಿಗೆ ಬಿಟ್ಟು ಹೋಗಿದ್ದನು. ಕೆಲವು ಗಂಟೆಗಳ ನಂತರ, ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಅವನ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.