ಗೋರಕ್ಷಣೆಯ ಕಾರ್ಯವನ್ನು ಮಾಡುತ್ತಿರುವಾಗ ದೇವರು ನಮ್ಮನ್ನು ಕಾಪಾಡಿದ ! – ಸತೀಶ್ ಕುಮಾರ್, ರಾಷ್ಟ್ರೀಯ ಅಧ್ಯಕ್ಷರು, ಗೋರಕ್ಷಾ ದಳ ಮತ್ತು ರಾಷ್ಟ್ರೀಯ ಸಂಘಟನ ಸಚಿವರು, ಶ್ರೀ ಹಿಂದೂ ತಖ್ತ್, ಪಂಜಾಬ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಮೂರನೇ ದಿನ (ಜೂನ್ 26): ದೇಶದ ಭದ್ರತೆ ಮತ್ತು ಧರ್ಮ ರಕ್ಷಣೆ

ಗೋವಾ – ಗೋವನ್ನು ಉಳಿಸಿದರೆ ಜಗತ್ತು ಉಳಿಯುತ್ತದೆ. ಸರ್ಕಾರ ತನ್ನ ಕೆಲಸ ಮಾಡಲಿದೆ. ನಮಗೆ ರಾಷ್ಟ್ರ, ಧರ್ಮ, ಗೋಸಂರಕ್ಷಣೆಯ ಕೆಲಸ ಮಾಡಬೇಕಾದರೆ ಹೋರಾಟ ಮಾಡಬೇಕು. ಧರ್ಮ ಮತ್ತು ಅಧರ್ಮದ ಯುದ್ಧವು ಒಂದು ದಿನ ಖಂಡಿತವಾಗಿಯೂ ಸಂಭವಿಸುತ್ತದೆ, ಹಿಂದೂಗಳಿಗೆ ಹೋರಾಡಬೇಕಾಗುತ್ತದೆ. ಅದಕ್ಕೆ ಹಿಂದೂಗಳು ಈಗಿನಿಂದಲೇ ತಯಾರು ಮಾಡಬೇಕು. ಭಾರತದಲ್ಲಿ ಗೋಹತ್ಯೆ ಮತ್ತು ಕಸಾಯಿಖಾನೆಗಳನ್ನು ಇನ್ನೂ ಮುಚ್ಚಿಲ್ಲ. ಗೋರಕ್ಷಕರ ತೊಂದರೆಗಳಲ್ಲಿ ಯಾವುದೇರೀತಿ ಕಡಿಮೆಯಾಗಿಲ್ಲ. ಇಂದಿಗೂ ಕೇವಲ ಗೋರಕ್ಷಕರನ್ನು ಬಂಧಿಸಲಾಗುತ್ತದೆ. ಗೋರಕ್ಷಕ ಕೆಲಸ ಮಾಡುವಾಗ, ನಮ್ಮ ಮೇಲೆ ಅನೇಕ ಬಾರಿ ದಾಳಿ ಮಾಡಲಾಯಿತು; ಆದರೆ ದೇವರು ಅದರಿಂದ ನಮ್ಮನ್ನು ರಕ್ಷಿಸಿದನು. ದೇವರು, ಧರ್ಮ, ರಾಷ್ಟ್ರ ಮತ್ತು ಗೋವನ್ನು ರಕ್ಷಿಸಿದರೆ ಆನಂದ ಸಿಗುತ್ತದೆ. ಸರಕಾರ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಮತ್ತು ಗೋಹತ್ಯೆ ನಿಲ್ಲಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಗೋಸಂರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಕುಮಾರ್ ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನವಾದ ಜೂನ್ 26 ರಂದು ಪ್ರತಿಪಾದಿಸಿದರು.

ಜೈಲಿನಲ್ಲಿದ್ದಾಗ ಸತೀಶ್ ಕುಮಾರ್ ಮಾಡಿದ ಸಾಧನೆ

ಗೋರಕ್ಷಣೆಯ ಕಾರ್ಯದಿಂದಾಗಿ ನಾನು ಸ್ವತಃ 3 ವರ್ಷ ಜೈಲಿನಲ್ಲಿದ್ದೆ. ಅಲ್ಲಿ ನಾನು ದೇವರ ನಾಮಸ್ಮರಣ ಮಾಡುತ್ತಿದ್ದೆ ಮತ್ತು 5 ಗ್ರಂಥಗಳನ್ನು ಬರೆದಿದ್ದೇನೆ. ನನ್ನನ್ನು ಜೈಲಿಗೆ ಹಾಕಿದ ದಿನ ಶ್ರೀಕೃಷ್ಣ ಜನ್ಮಾಷ್ಟಮಿ ಇತ್ತು. ಸಾವು ಎಲ್ಲರಿಗೂ ಅನಿವಾರ್ಯ. ಆ ತೊಂದರೆಗಳು ದೇಹಕ್ಕೆ ಸಂಬಂಧಿಸಿವೆಯೇ ಹೊರತು ಮನಸ್ಸಿಗಲ್ಲ. ಆದುದರಿಂದ ಧರ್ಮದ ಕೆಲಸ ಆಗಬೇಕಾದರೆ ಭಯವನ್ನು ಬಿಡಬೇಕು.

ಕಳೆದ ಕೆಲವು ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಗೋವಾದಲ್ಲಿ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ಹಿಂದೂ ರಾಷ್ಟ್ರದ ಬೇಡಿಕೆ ಶುರುವಾಗಿತ್ತು. ಈಗ ದೇಶದೆಲ್ಲೆಡೆಯಿಂದ ಹಿಂದೂ ರಾಷ್ಟ್ರದ ಬೇಡಿಕೆ ಹೆಚ್ಚುತ್ತಿದೆ ! – ಸತೀಶ್ ಕುಮಾರ್, ರಾಷ್ಟ್ರೀಯ ಅಧ್ಯಕ್ಷ, ಗೋರಕ್ಷ ದಳ