Demand From Musilm Organization: ಕೇರಳವನ್ನು ವಿಭಜಿಸಿ ಸ್ವತಂತ್ರ ‘ಮಲಬಾರ್’ ರಾಜ್ಯವನ್ನು ರಚಿಸಲು ಮುಸ್ಲಿಂ ಸಂಘಟನೆಯ ಆಗ್ರಹ.

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಹೆಸರನ್ನು ಬದಲಾಯಿಸಿ ‘ಕೇರಳಮ್’ ಎಂದು ಬದಲಿಸುವ ಕೋರಿಕೆಯ ಬದಲಿಗೆ ‘ಸುನ್ನಿ ಯುವಜನ ಸಂಗಮ’ ಸಂಘಟನೆಯ ಮುಖಂಡ ಮುಸ್ತಫಾ ಮುಂಡುಪಾರಾ ಅವರು ಸ್ವತಂತ್ರ ‘ಮಲಬಾರ್’ ರಾಜ್ಯವನ್ನು ಕೋರಿದ್ದಾರೆ. ಮಲಬಾರ್‌ನ ಶಾಲೆಗಳಲ್ಲಿನ ಸ್ಥಳಾವಕಾಶದ ಕೊರತೆ ಬಗ್ಗೆ ಆಯೋಜಿಸಲಾದ ಪ್ರದರ್ಶನದ ವೇಳೆ ಮುಸ್ತಫಾ ಮಾತನಾಡುತ್ತಿದ್ದರು.

ಮುಸ್ತಫಾ ಮುಂದೆ ಮಾತನಾಡಿ, ‘ನಾವು ದಕ್ಷಿಣ ಕೇರಳ ಮತ್ತು ಮಲಬಾರ್ ನಡುವಿನ ಅನ್ಯಾಯವನ್ನು ನೋಡಿ ಯಾರಾದರೂ ಪ್ರತ್ಯೇಕ ಮಲಬಾರ್ ರಾಜ್ಯವನ್ನು ಕೋರಿದರೆ ಅವರನ್ನು ದೂಷಿಸುವ ಅಗತ್ಯವಿಲ್ಲ. ಮಲಬಾರ್ ನ ಜನರು ಮತ್ತು ದಕ್ಷಿಣ ಕೇರಳದ ಜನರು ಸಮಾನ ತೆರಿಗೆಯನ್ನು ಭರಿಸುತ್ತಿದ್ದಾರೆ. ನಮಗೂ ಸಮಾನ ಸೌಲಭ್ಯಗಳು ಸಿಗಬೇಕು. ಈ ಬೇಡಿಕೆಯನ್ನು ಪ್ರತ್ಯೇಕತಾವಾದ ಎನ್ನುವುದರಲ್ಲಿ ಅರ್ಥವಿಲ್ಲ’ ಎಂದರು.

ಬಿಜೆಪಿಯ ಟೀಕೆ

ಮುಸ್ತಫಾ ಮುಂಡುಪಾರಾ ಅವರ ಇಂತಹ ಭಾಷಣದ ನಂತರವೂ ಅವರ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಕೊಳ್ಳದೇ ಇರುವುದಕ್ಕೆ ಕೇರಳ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ಸತೀಶ ಯಂಚಯ್ಯವರ್ ಅವರನ್ನು ಟೀಕಿಸಿದ್ದಾರೆ. ಸುರೇಂದ್ರ ಅವರು ಮಾತನಾಡಿ, ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ನಿಷೇಧ ಹೇರಿರುವುದರಿಂದ ಕೇರಳದ ಮೂಲಭೂತವಾದಿ ಶಕ್ತಿ ನಷ್ಟವಾಗಿದೆಯೆಂದು ಅನಿಸುತ್ತಿದ್ದರೆ ಅದು ತಪ್ಪಾಗಿದೆ. ಪ್ರತ್ಯೇಕ ರಾಜ್ಯದ ಬೇಡಿಕೆಯು ಉದ್ಧಟತನದದ್ದಾಗಿದ್ದು, ಈ ವಿಷಯದ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಮತ್ತು ಸತೀಶನ್ ಅವರು ಮೌನವಾಗಿರುವುದರಿಂದ ರಾಜ್ಯದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ ಪಕ್ಷವು ಮಂಡಿಯೂರಿದೆಯೆಂದು ಕಂಡುಬರುತ್ತಿದೆ. ಮತಕ್ಕಾಗಿ ಅವರು ನಾಚಿಕೆಯಿಲ್ಲದೇ ರಾಷ್ಟ್ರೀಯ ಅಖಂಡತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸುರೇಂದ್ರ ಟೀಕಿಸಿದರು.

2021 ರಲ್ಲಿಯೇ ಸ್ವತಂತ್ರ ‘ಮಲಬಾರ್’ಗೆ ಬೇಡಿಕೆ!

ಮಲಬಾರ್ ಭೂಭಾಗವನ್ನು ಕೇರಳದಿಂದ ಪ್ರತ್ಯೇಕಿಸಬೇಕೆಂಬ ಬೇಡಿಕೆ ಬಂದಿರುವುದು ಇದೇ ಮೊದಲ ಸಲ ಅಲ್ಲ. ಇದಕ್ಕೂ ಮುನ್ನ `ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್’ 2021 ರ ಮಧ್ಯದಲ್ಲಿ ಇಂತಹ ಬೇಡಿಕೆಯನ್ನು ಮಾಡಿತ್ತು. ಈ ಸಂಘಟನೆಯ ಪತ್ರಿಕೆಯಾದ ‘ಸತ್ಯಧಾರಾ’ದ ಸಂಪಾದಕ ಅನ್ವರ ಸಾದಿಕ ಫೈಸಿ ಅವರು ಮುಸ್ಲಿಂ ಪ್ರಾಬಲ್ಯವಿರುವ ಮಲಬಾರ್ ಪ್ರದೇಶವನ್ನು ಕೇರಳದಿಂದ ಬೇರ್ಪಡಿಸಿ ‘ಮಲಬಾರ್’ ಎಂಬ ಹೊಸ ರಾಜ್ಯವನ್ನು ರಚಿಸುವಂತೆ ಒತ್ತಾಯಿಸಿದ್ದರು. ಮಲಬಾರ್ ಪ್ರದೇಶವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕೆಂದು ಮುಸ್ತಫಾ ಕೋರಿದ್ದರು. ಮಲಬಾರ್ ಕ್ಷೇತ್ರದೊಳಗೆ ತ್ರಿಶೂರ್, ಪಾಲಕ್ಕಾಡ, ಮಲಪ್ಪುರಂ, ಕೋಝಿಕ್ಕೋಡ, ವಯನಾಡ, ಕಣ್ಣೂರು ಮತ್ತು ಕಾಸರಗೋಡು ಪ್ರದೇಶಗಳು ಬರುತ್ತವೆ. 2011ರ ಜನಗಣತಿಯ ಪ್ರಕಾರ ತ್ರಿಶೂರ್ ನಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ.17.07, ಪಾಲಕ್ಕಾಡನಲ್ಲಿ ಶೇ.27.96, ಮಲಪ್ಪುರಮನಲ್ಲಿ ಶೇ. 70.24, ಕೋಝಿಕೋಡದಲ್ಲಿ ಶೇ.37.66, ವಾಯನಾಡನಲ್ಲಿ ಶೇ.28.65, ಕಣ್ಣೂರಿನಲ್ಲಿ ಶೇ. 29.43 ಮತ್ತು ಕಾಸರಗೋಡಿನಲ್ಲಿ ಶೇ.37.24 ರಷ್ಟು ಮುಸಲ್ಮಾನರು ವಾಸವಾಗಿದ್ದಾರೆ .

ಸಂಪಾದಕೀಯ ನಿಲುವು

ಇಂತಹ ರಾಜ್ಯ ಸ್ಥಾಪನೆಯಾದರೆ ನಾಳೆ ಇದೇ ಸಂಘಟನೆಯು ‘ಮಲಬಾರ್’ ಅನ್ನು ಸ್ವತಂತ್ರ ದೇಶವೆಂದು ಘೋಷಿಸಬೇಕೆಂದು ಕೋರಬಹುದು.