PIL Filed To Remove Sai Baba Idol: ತಮಿಳುನಾಡಿನ ಹಿಂದೂ ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದುಹಾಕಿರಿ !

  • ಮದ್ರಾಸ ಉಚ್ಚನ್ಯಾಯಾಲಯದಲ್ಲಿ ಅರ್ಜಿಯ ಮೂಲಕ ಮನವಿ

  • ದತ್ತಿ ಇಲಾಖೆಗೆ ಆದೇಶ ನೀಡುವಂತೆ ಮನವಿ

ಚೆನ್ನೈ (ತಮಿಳುನಾಡು) – `ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ಗೆ ತಮ್ಮ ನಿಯಂತ್ರಣದಲ್ಲಿರುವ ಎಲ್ಲಾ ದೇವಸ್ಥಾನಗಳಿಂದ ಶಿರಡಿಯ ಸಾಯಿಬಾಬಾರವರ ಮೂರ್ತಿಯನ್ನು ತೆಗೆದುಹಾಕುವಂತೆ ಆದೇಶಿಸಲು ಮದ್ರಾಸ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ದೇವಸ್ಥಾನಗಳಲ್ಲಿ ಸಾಯಿಬಾಬಾರವರ ಮೂರ್ತಿಯನ್ನು ಸ್ಥಾಪಿಸುವುದು ಆಗಮ ಶಾಸ್ತ್ರಕ್ಕೆ (ದೇವಸ್ಥಾನ ನಿರ್ಮಾಣ, ದೇವಸ್ಥಾನಗಳಲ್ಲಿನ ಪೂಜೆ, ವ್ರತ ಇತ್ಯಾದಿಗಳಿಗೆ ಸಂಬಂಧಿಸಿದ ನಿಯಮಾವಳಿ) ವಿರುದ್ಧವಾಗಿದೆಯೆಂದು ಇದರಲ್ಲಿ ಹೇಳಲಾಗಿದೆ. ನ್ಯಾಯಾಲಯವು ಜೂನ್ 25 ರಂದು ಇದರ ಮೇಲೆ ಆಲಿಕೆ ನಡೆಸಿದೆ, ಈ ಸಂದರ್ಭದಲ್ಲಿ 2 ವಾರಗಳಲ್ಲಿ ಪ್ರತಿಜ್ಞಾಪತ್ರ ಸಲ್ಲಿಸುವಂತೆ ಇಲಾಖೆಗೆ ಹೇಳಿದೆ.

ರಾಜ್ಯದ ಕೊಯಮತ್ತೂರಿನ ಡಿ.ಸುರೇಶಬಾಬುರವರು ಈ ಅರ್ಜಿಯನ್ನು ದಾಖಲಿಸಿದ್ದಾರೆ. ಅವರು ಅರ್ಜಿಯಲ್ಲಿ ಅನೇಕ ದೇವಸ್ಥಾನಗಳಲ್ಲಿ ಸಾಯಿಬಾಬಾರವರ ಬಿಳಿ ಅಮೃತಶಿಲೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಹೆಚ್ಚುತ್ತಿರುವ ಪದ್ದತಿಯಿಂದ ನಾನು ದುಃಖಿತನಾಗಿದ್ದೇನೆ. ಸಾಯಿಬಾಬಾರ ನಿಜವಾದ ಹೆಸರು ತಿಳಿದಿಲ್ಲ. ಅವರ ಅನೇಕ ಮುಸಲ್ಮಾನ ಅನುಯಾಯಿಗಳಿದ್ದರೂ, ಅವರ ಧಾರ್ಮಿಕ ಗುರುತಿನ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅವರ ವಿಷಯದ ಪುಸ್ತಕದಲ್ಲಿ ಅನೇಕ ಬಾರಿ ಸಾಯಿಬಾಬಾರವರ ಪರ್ಷಿಯನ್ ವಾಕ್ಯಗಳನ್ನು ಉಲ್ಲೇಖಿಸಲಾಗಿದೆ. ಅಲ್ಲಾ ಮತ್ತು ಕುರಾನ್ ಬಗ್ಗೆ ಹೇಳಲಾಗಿದೆ. ಸಾಯಿಬಾಬಾರವರು ‘ಅಲ್ಲಾಹನು ಎಲ್ಲಿಟ್ಟಿದ್ದಾನೆಯೋ ಅಲ್ಲಿಯೇ ಇರಿ’ ಎಂದು ಹೇಳಿದ್ದಾರೆ. ಇಸ್ಲಾಂ ಮತ್ತು ಹಿಂದೂ ಧರ್ಮವನ್ನು ಪ್ರಚಾರ ಮಾಡುವ ವ್ಯಕ್ತಿಯಾಗಿದ್ದರೂ ಸಾಯಿಬಾಬಾರವರ ಮೂರ್ತಿಗಳನ್ನು ಹಿಂದೂ ದೇವಾಲಯಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ಮೂರ್ತಿಗಳನ್ನು ದೇವಸ್ಥಾನಗಳಿಂದ ತೆರವುಗೊಳಿಸಲು ದತ್ತಿ ಇಲಾಖೆಗೆ ಸೂಚನೆ ನೀಡಬೇಕು ಹಾಗೂ ಮುಂದೆ ಇಂತಹ ಮೂರ್ತಿಗಳನ್ನು ದೇವಸ್ಥಾನಗಳಲ್ಲಿ ಇಡದಂತೆ ಎಚ್ಚರ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.