|
ವಾರಾಣಸಿ (ಉತ್ತರ ಪ್ರದೇಶ) – ಗಂಗಾ ನದಿಯು ತನ್ನ ದಡವನ್ನು ಬಿಟ್ಟಿದೆ. ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಗಂಗಾ ನದಿಯು ಸುಮಾರು 15 ಅಡಿಗಳಷ್ಟು ಕೆಳಗೆ ಹೋಗಿದೆ. ಗಂಗಾ ನದಿಯ ಮಧ್ಯ ಭಾಗದೊಂದಿಗೆ, ಗಂಗೆಯ ದಡವೂ ಮರಳಿನ ದಡವಾಗಿ ಪರಿವರ್ತನೆಯಾಗುತ್ತಿದೆ. ಈ ಸಂದರ್ಭದಲ್ಲಿ ವಿಜ್ಞಾನಿಗಳು ಇದೆಲ್ಲವನ್ನು ನೋಡಿದರೆ ನಂಬಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದಾರೆ.
1. ಗಂಗಾನದಿಯಲ್ಲಿ ಜನವಸತಿಯಿರುವ ಘಾಟಗಳಲ್ಲಿ ಮರಳು ಮತ್ತು ಕೆಸರು ಸಂಗ್ರಹವಾಗುತ್ತಿರುವುದು ಮೊದಲ ಬಾರಿಗೆ ಕಂಡುಬಂದಿದೆ. ವಾರಾಣಸಿಯಲ್ಲಿನ ಗಂಗಾ ನದಿಯ 40ಕ್ಕೂ ಹೆಚ್ಚಿನ ಘಾಟಗಳಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಸಿಂಧಿಯಾ ಘಾಟ, ಸಕ್ಕಾ ಘಾಟ, ಲಲಿತಾ ಘಾಟನಿಂದ ದಶಾಶ್ವಮೇಧ ಘಾಟ ಮತ್ತು ಪಾಂಡೆ ಘಾಟವರೆಗೆ ಮರಳು ಮತ್ತು ಕೆಸರು ತಲುಪಿದೆ. ಅಸ್ಸಿ ಘಾಟ ಈಗಾಗಲೇ ಮರಳು ಮತ್ತು ಮಣ್ಣಿನಿಂದ ಆವರಿಸಲ್ಪಟ್ಟಿದೆ. ದಶಾಶ್ವಮೇಧ ಘಾಟಿನ ಮೇಲೆ ಹೆಚ್ಚು ಹೆಚ್ಚು ಮರಳು ಮತ್ತು ಮಣ್ಣು ಸಂಗ್ರಹವಾಗುತ್ತದೆ. ಇಲ್ಲಿ ಬರುವ ಪ್ರವಾಸಿಗರು, ಭಾವಿಕರು ಘಾಟಿನ ಮೆಟ್ಟಿಲುಗಳನ್ನು ಇಳಿದು ಮರಳು ಹಾಗೂ ಕೆಸರಿನಲ್ಲಿ ನಿಂತು ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ.
2. ದೋಣಿ ವಿಹಾರಕ್ಕೆ ಹೋಗುವವರಿಗೂ ಮರಳನ್ನು ದಾಟಿ ಹೋಗಬೇಕಾಗುತ್ತಿದೆ. ದಶಾಶ್ವಮೇಧ ಘಾಟನ ಎದುರು ಸುಮಾರು ಒಂದೂವರೆ ಕಿಲೋಮೀಟರನಷ್ಟು ದೊಡ್ಡ ದಿಬ್ಬ ಜಮೆಯಾಗಿದೆ. ಗಾಯ ಘಾಟ ಮತ್ತು ರಾಜ ಘಾಟನ ನಡುವೆ 2 ಕಿಲೋಮೀಟರ್ ಅಗಲದ ಮರಳು ದಿಬ್ಬ ನಿರ್ಮಾಣವಾಗಿದೆ. ಘಾಟಿನ ಎದುರಿನಲ್ಲಿ ಗಂಗೆಯ ನಡುಮಧ್ಯದಲ್ಲಿ ಮರಳಿನ ಉದ್ದನೆಯ ಪಟ್ಟಿ ನಿರ್ಮಾಣವಾಗಿದೆ. ಇಲ್ಲಿ ನೀರಿನ ಉಪಲಬ್ಧತೆ ಗಮನಾರ್ಹವಾಗಿ ಕ್ಷೀಣಿಸಿದೆ.
3. ವಿಜ್ಞಾನಿಗಳು ‘ಗಂಗಾ ನದಿಯ ನಿರಂತರ ಹರಿವನ್ನು ತಡೆದಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ’ ಎಂದು ಹೇಳುತ್ತಾರೆ. ಅಣೆಕಟ್ಟುಗಳಿಂದಾಗಿ ಗಂಗಾ ನದಿಗೆ ಹಾನಿಯಾಗುತ್ತಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಸರಕಾರದ ಪ್ರಯತ್ನ ವಿಫಲವಾಗುತ್ತಿದೆ.
4. ಬನಾರಸ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನ ಕೇಂದ್ರದ ಪ್ರಾ. ಡಾ. ಬಿ.ಡಿ. ತ್ರಿಪಾಠಿಯವರು ಮಾತನಾಡುತ್ತ, ಕೊಳಚೆ ನೀರು ಪ್ರಕ್ರಿಯೆಯ ಯೋಜನೆ ಪೂರ್ಣಗೊಂಡಿದೆ ಮತ್ತು ಎಲ್ಲಾ ಕೆಲಸಗಳು ನಡೆಯುತ್ತಿವೆ; ಆದರೆ ಗಂಗಾ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ. ಗಂಗಾ ನದಿಯಲ್ಲಿ ನೀರು ಇಲ್ಲದಿರುವುದರಿಂದ ಚರಂಡಿಯ ಕೊಳಚೆ ನೀರು ಅದರಲ್ಲಿ ಬೀಳುತ್ತಿದೆ. ಹೀಗಾಗಿ ಇಲ್ಲಿ ಮಾಲಿನ್ಯ ಹೆಚ್ಚುತ್ತಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವು* ‘ಗಂಗಾ ನದಿಯ ದಯನೀಯ ಸ್ಥಿತಿಯು ಆಪತ್ಕಾಲದ ಆರಂಭವಾಗಿದೆ’, ಎಂದು ಹೇಳಿದರೆ ತಪ್ಪಾಗಲಾರದು ! * ಗಂಗಾ ನದಿಯನ್ನು ‘ದೇವನದಿ’ ಎಂದು ಕರೆಯಲಾಗುತ್ತದೆ. ಅಪಾರ ಆಧ್ಯಾತ್ಮಿಕ ಮಹತ್ವವಿರುವ ಈ ನದಿಯ ದಯನೀಯ ಸ್ಥಿತಿಯು ಸರಕಾರಿ ವ್ಯವಸ್ಥೆ ಮತ್ತು ಹಿಂದೂಗಳಿಗೆ ನಾಚಿಕೆಗೇಡು ! |