Anti-Hindu Narrative in Films : ಧರ್ಮಹಾನಿ ಮಾಡುವ ‘ಒಟಿಟಿ ಪ್ಲಾಟ್‌ಫಾರ್ಮ್’ಗಳಿಗೆ ಕಡಿವಾಣ ಹಾಕಲು ಪರಿನಿರೀಕ್ಷಣಾ(ಸೆನ್ಸಾರ ಬೋರ್ಡ್) ಮಂಡಳ ಆವಶ್ಯಕ ! – ಜ್ಯೋತ್ಸನಾ ಗರ್ಗ್, ಪ್ರಧಾನ ಕಾರ್ಯದರ್ಶಿ, ‘ನೇಷನ್ ಫಸ್ಟ್ ಕಲೆಕ್ಟೀವ್’

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಎರಡನೇ ದಿನ (ಜೂನ್ ೨೫) – ೨ ನೇ ಸತ್ರ : ರಾಷ್ಟ್ರರಕ್ಷಣೆ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಹಿಂದೂಸಂಘಟನೆ

(ವೀಕ್ಷಕರು ಒಟಿಟಿ ವೇದಿಕೆಯಿಂದ ಚಲನಚಿತ್ರಗಳು, ವೆಬ್ ಸರಣಿಗಳು ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ.)

ಗೋವಾ – ಚಲನಚಿತ್ರಗಳಿಗೆ ’ಚಲನಚಿತ್ರ ಪರಿನಿರೀಕ್ಷಣಾ ಮಂಡಳ’ (ಸೆನ್ಸಾರ್ ಬೋರ್ಡ್) ಇರುವುದರಿಂದ ಸಮಾಜಕ್ಕೆ ಹಾನಿಕರವಾದ ಚಲನಚಿತ್ರಗಳಿಗೆ ಕಡಿವಾಣ ಹಾಕಬಹುದು. ಅದೇ ರೀತಿ ‘ಒಟಿಟಿ ಪ್ಲ್ಯಾಟಫಾರ್ಮ್’ಗೆ ಯಾವುದೇ ರೀತಿಯ ‘ಪರಿನಿರೀಕ್ಷಣಾ ಮಂಡಳ’ ಇಲ್ಲದ ಕಾರಣ ಆ ಮೂಲಕ ದೊಡ್ಡ ಪ್ರಮಾಣದಲ್ಲಿ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ವಿರೋಧಿಸುವ ವಿಷಯಗಳು ಪ್ರಸಾರವಾಗುತ್ತಿರುತ್ತವೆ. ಇಂತಹ ‘ಒಟಿಟಿ ಪ್ಲಾಟ್‌ಫಾರ್ಮ್’ಗಳಿಗೆ ಕಡಿವಾಣ ಹಾಕಲು ‘ಪರಿನಿರೀಕ್ಷಣಾ ಮಂಡಳ’ವನ್ನು ಸ್ಥಾಪಿಸಬೇಕು, ಎಂಬ ಬೇಡಿಕೆಯನ್ನು ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಸಲ್ಲಿಸಬೇಕು ಎಂದು ‘ನೇಷನ್ ಫಸ್ಟ್ ಕಲೆಕ್ಟಿವ್’ನ ಪ್ರಧಾನ ಕಾರ್ಯದರ್ಶಿ ಕು. (ಸುಶ್ರೀ) ಜ್ಯೋತ್ಸನಾ ಗರ್ಗ್ ಇವರು ಪ್ರತಿಪಾದಿಸಿದ್ದಾರೆ. ಅವರು ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇ ದಿನದಂದು ಮಾತನಾಡುತ್ತಿದ್ದರು. ‘ಚಲನಚಿತ್ರಗಳಲ್ಲಿ ತೋರಿಸಲಾಗುವ ಹಿಂದೂ ವಿರೋಧಿ ಘಟನೆಗಳನ್ನು ತಡೆಗಟ್ಟಲು ಮಾಡಬೇಕಾದ ಪ್ರಯತ್ನ’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ಜ್ಯೋತ್ಸನಾ ಗರ್ಗ್ ಇವರು ‘ಚಲನಚಿತ್ರ ಪರಿನಿರೀಕ್ಷಣಾ ಮಂಡಳ’ದ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ಅವರು ತಮ್ಮ ಸ್ತರದಲ್ಲಿ ದೇಶ, ಹಿಂದೂ ಧರ್ಮ ಮತ್ತು ಸಂಸ್ಕೃತಿ ಇವುಗಳ ಅವಹೇಳನವನ್ನು ಮಾಡುವ ವಿವಿಧ ಚಲನಚಿತ್ರಗಳನ್ನು ವಿರೋಧಿಸಿದ್ದಾರೆ. ಈ ಕಾರಣದಿಂದಾಗಿ, ಕೆಲವು ಚಲನಚಿತ್ರಗಳು ಪ್ರಸಾರವಾಗಲಿಲ್ಲ, ಹಾಗೂ ಕೆಲವು ಚಲನಚಿತ್ರಗಳಲ್ಲಿನ ಕೆಲವು ವಿಡಂಬನಾತ್ಮಕ ಭಾಗಗಳನ್ನು ಬಿಟ್ಟುಬಿಡಲಾಗಿದೆ.