Liberate ShriKrishna Janmabhoomi : ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ ಸಹಭಾಗ ಆಗಿರಿ ! – ಆಚಾರ್ಯ ರಾಜೇಶ್ವರ, ರಾಷ್ಟ್ರೀಯ ಅಧ್ಯಕ್ಷರು, ಸಂಯುಕ್ತ ಭಾರತೀಯ ಧರ್ಮಸಂಸದ, ರಾಜಸ್ಥಾನ

ಆಧ್ಯಾತ್ಮಿಕ ಸಂಸ್ಥೆಗಳ ಮೂಲಕ ಧಾರ್ಮಿಕ ಜಾಗೃತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ

ಆಚಾರ್ಯ ರಾಜೇಶ್ವರ

‘ಕಥೆಯನ್ನು ರದ್ದುಪಡಿಸಿ ನಷ್ಟವುಂಟಾದರೂ ಪರವಾಗಿಲ್ಲ; ಆದರೆ ನಾನು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕೆ ಹೋಗಲು ನಿರ್ಧರಿಸಿದ್ದೆ. ಯಾವ ಸಂಘಟನೆ ಭಾರತದಾದ್ಯಂತ ಹಿಂದುತ್ವದ ಕೆಲಸವನ್ನು ಬಲಪಡಿಸುತ್ತಿದೆಯೋ ಅವರ ಈ ಅಧಿವೇಶನಕ್ಕೆ ಬರಲು ಅವಕಾಶ ಸಿಕ್ಕಿದೆ. ಅನೇಕ ಉಪದೇಶಕರಿದ್ದಾರೆ; ಆದರೆ ಪ್ರತ್ಯಕ್ಷ ಕೃತಿ ಮಾಡುವವರು ಕಡಿಮೆ ಇದ್ದಾರೆ. ಇಂದು ಶ್ರೀ ಕೃಷ್ಣ ಜನ್ಮಭೂಮಿಯ 13.27 ಎಕರೆ ಪ್ರದೇಶದಲ್ಲಿ ಮಸೀದಿ ಇದೆ. ಇಲ್ಲಿಯವರೆಗೆ ಕುತುಬುದ್ದೀನ್, ತುಘಲಕ್, ಜಹಾಂಗೀರ್ ಮುಂತಾದ ಅನೇಕ ಆಕ್ರಮಣಕಾರರು ಶ್ರೀ ಕೃಷ್ಣ ದೇವಾಲಯ ಸೇರಿದಂತೆ ನೂರಾರು ದೇವಾಲಯಗಳನ್ನು ಕೆಡವಿದರು. ಭಗವಾನ್ ಕೃಷ್ಣನ ಭವ್ಯವಾದ ದೇವಾಲಯವನ್ನು ಹಲವಾರು ಬಾರಿ ನಿರ್ಮಿಸಲಾಯಿತು; ಆದರೆ ಅದನ್ನು ಕೆಡವಲಾಯಿತು. ಈಗ ನಾವು ಶ್ರೀ ಕೃಷ್ಣ ಜನ್ಮಭೂಮಿಯನ್ನು ಮುಕ್ತಗೊಳಿಸಬೇಕು ಮತ್ತು ಅಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಬೇಕು.

ಈ ಯುದ್ಧದಲ್ಲಿ ಹೋರಾಡಲು ಸಾಧನೆ ಮತ್ತು ನಾಮಜಪದಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬೇಕು. ಆದ್ದರಿಂದ ನಾವು ನಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ ಮತ್ತು ನಿರ್ಲಕ್ಷಿಸುವುದಿಲ್ಲ. ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ನಿಮ್ಮೆಲ್ಲರ ಬೆಂಬಲ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.