Ghodbunder Fort : ಬಾಯಿದರ: ಘೋಡಬಂದರ ಕೋಟೆಯ ನೆಲ ಮಾಳಿಗೆಯಲ್ಲಿ ರಹಸ್ಯ ಕೋಣೆಯೊಂದು ಪತ್ತೆ!

ಬಾಯಿದರ (ಠಾಣೆ, ಮಹಾರಾಷ್ಟ್ರ ) – ಐತಿಹಾಸಿಕ ಘೋಡಬಂದರ ಕೋಟೆಯನ್ನು ಅಲಂಕರಿಸುವಾಗ ಅಲ್ಲಿನ ನೆಲೆಮಾಳಿಗೆಯಲ್ಲೊಂದು ರಹಸ್ಯ ಕೋಣೆ ಇರುವುದು ಕಂಡುಬಂದಿದೆ. ಪುರಾತತ್ವ ಇಲಾಖೆಯಿಂದ ಈ ಕೋಣೆಯ ಸಮೀಕ್ಷೆ ನಡೆಸಲಾಗಿದೆ .

ಕಳೆದ ಅನೇಕ ವರ್ಷಗಳಿಂದ ಈ ಕೋಟೆಯ ರಿಪೇರಿ ಕಾರ್ಯ ನಡೆಯುತ್ತಿದೆ. ಮಹಾನಗರ ಪಾಲಿಕೆಯಿಂದ ರಾಜ್ಯ ಸರಕಾರದ ಬಳಿ ಘೋಡಬಂದರ ಕೋಟೆಯು ‘ಮಹಾರಾಷ್ಟ್ರ ವೈಭವ-ರಾಜ್ಯ ಸಂರಕ್ಷಿತ ಸ್ಮಾರಕ ಯೋಜನೆ’ಯ ಅಡಿಯಲ್ಲಿ ಅಭಿವೃದ್ಧಿಗಾಗಿ ನೀಡಲು ಆಗ್ರಹಿಸಲಾಗಿತ್ತು. ಸರಕಾರ ಇದಕ್ಕೆ ೨೦೧೯ ರಲ್ಲಿ ಒಪ್ಪಿಗೆ ನೀಡಿತ್ತು. ಅದರ ನಂತರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಮುಖ್ಯ ಪ್ರವೇಶ ದ್ವಾರದ ಹತ್ತಿರ ಕಮಾನಿಗಾಗಿ ಅಗೆಯುವ ಕೆಲಸ ಮಾಡುವಾಗ ಅದ್ಭುತವಾದ ಗೋಡೆ ಇರುವ ನೆಲೆಮಾಳಿಗೆಯಲ್ಲಿ ಕೋಣೆಯೊಂದು ಕಾರ್ಮಿಕರಿಗೆ ಕಂಡುಬಂದಿತು.

ಮುಖ್ಯವಾಗಿ ಈ ಕೋಣೆಯ ಉಪಯೋಗವು ತುರ್ತು ಪರಿಸ್ಥಿತಿಯಲ್ಲಿ ಜನರನ್ನು ಸುರಕ್ಷಿತವಾಗಿಡುವುದಕ್ಕಾಗಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಇನ್ನೂ ಇಂತಹ ಕೆಲವು ಕೋಣೆಗಳು ಸಿಗುವ ಸಾಧ್ಯತೆ ಕಂಡು ಬರುವುದರಿಂದ ಇಲ್ಲಿ ಮಣ್ಣಿನ ಉತ್ಕನನ ಮಾಡಲಾಗುವುದೆಂದು ಪುರಾತತ್ವದ ವಿಜ್ಞಾನಿಗಳು ತಿಳಿಸಿದ್ದಾರೆ.