ಶ್ರೀಲಂಕಾ ರಾಷ್ಟ್ರಪತಿ ವಿಕ್ರಮಸಿಂಘೆಯವರ ಬಹಿರಂಗ ಸ್ವೀಕೃತಿ
ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಮೊದಲ ಬಾರಿಗೆ ಭಾರತದ ನೆರವಿನಿಂದ ತಮ್ಮ ದೇಶವು ಎರಡು ವರ್ಷಗಳಲ್ಲಿನ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. ಇದೆಲ್ಲವೂ ಭಾರತದಿಂದ ಪಡೆದ 29 ಸಾವಿರ ಕೋಟಿ 247 ಕೋಟಿ (350 ಕೋಟಿ ಡಾಲರ್) ಆರ್ಥಿಕ ನೆರವಿನಿಂದ ಸಾಧ್ಯವಾಯಿತು. ಇದೆಲ್ಲವನ್ನೂ ಹಿಂತಿರುಗಿಸಲಾಗುವುದು ಎಂದವರು ಹೇಳಿದರು.
ಕೊಲಂಬೊದಲ್ಲಿ ನಡೆದ 31ನೇ ಅಖಿಲ ಭಾರತ ಸಹಭಾಗಿತ್ವ ಸಭೆಯಲ್ಲಿ ಮಾತನಾಡಿದ ವಿಕ್ರಮಸಿಂಘೆ, ಅಕ್ಷಯ ಶಕ್ತಿ ಒಂದು ಮಹತ್ವದ ಭಾಗವಾಗಿದೆ. ಈ ಯೋಜನೆಗಾಗಿ ಎರಡೂ ದೇಶಗಳು ಜಂಟಿಯಾಗಿ ಕೆಲಸ ಮಾಡಲಿವೆ. ಜಂಟಿ ಕಾರ್ಯಕ್ರಮಕ್ಕೆ ವೇಗವನ್ನು ಹೆಚ್ಚಿಸುವ ಆವಶ್ಯಕತೆಯಿರುವಾಗ ನಾನು ನನ್ನ ಹಿಂದಿನ ಭೇಟಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿದಾಗ, ಅವರು ಅದನ್ನು ಒಪ್ಪಿಕೊಂಡರು. ನಾವು ಅನೇಕ ಪ್ರಸ್ತಾಪಗಳ ಬಗ್ಗೆ ಚರ್ಚಿಸಿದ್ದೇವೆ ಎಂದವರು ತಿಳಿಸಿದರು.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯರಿರುವ ಭಾರತವು ಯಾವಾಗಲೂ ನಿರಪೇಕ್ಷವಾಗಿ ನೆರೆಯ ದೇಶಗಳಿಗೆ ಸಹಾಯ ಮಾಡಿದೆ. ಆದರೆ ನೆರೆಯ ದೇಶಗಳಿಂದ ಯಾವಾಗಲೂ ಭಾರತಕ್ಕೆ ಮತ್ತು ಅವರ ದೇಶಗಳಲ್ಲಿರುವ ಹಿಂದೂಗಳಿಗೆ ಯಾವುದೇ ಲಾಭವಾಗಿಲ್ಲ. ಆ ದೇಶಗಳಲ್ಲಿನ ಹಿಂದೂಗಳ ಮೇಲೆ ಮಾತ್ರ ದೌರ್ಜನ್ಯ ನಡೆಯುತ್ತಲೇ ಇದೆ. |