ಕೇಂದ್ರ ಸರಕಾರದ ಹೊಸ ನಿಯಮ
ನವದೆಹಲಿ: ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುವ ನೌಕರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕಚೇರಿ ವೇಳೆಗಿಂತ ವಿಳಂಬವಾಗಿ ನೌಕರರು ತಲುಪಿದರೆ, ಅವರ ಕೆಲಸದ ದಿನವನ್ನು ಅರ್ಧ ದಿನವೆಂದು ಮಾತ್ರ ಪರಿಗಣಿಸಲಾಗುವುದು, ಅಂದರೆ, ತಡವಾಗಿ ಬಂದಲ್ಲಿ ಅರ್ಧದಿನದ ಸಾಂದರ್ಭಿಕ ರಜೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಾರ್ವಜನಿಕರಿಂದ ಬಂದ ವಿವಿಧ ದೂರುಗಳನ್ನು ಆಧರಿಸಿ ಕೇಂದ್ರ ಸರಕಾರ ಈ ನಿಯಮ ಜಾರಿಗೆ ತಂದಿದೆ.
ಕೇಂದ್ರ ಸರಕಾರವು ನೌಕರರಿಗೆ ಕಚೇರಿ ವೇಳೆಯಲ್ಲಿ 15 ನಿಮಿಷಗಳವರೆಗೆ ವಿಳಂಬವಾಗಿ ಬರಲು ಮಾತ್ರ ಅವಕಾಶ ನೀಡಿದೆ. ಇದಕ್ಕಿಂತ ಹೆಚ್ಚು ವಿಳಂಬವಾದರೆ ಅರ್ಧ ದಿನ ಎಂದು ಪರಿಗಣಿಸಲಾಗುವುದು ಎಂದು ಖಡಕ್ ಆಗಿ ಹೇಳಿದೆ.
ಸಂಪಾದಕೀಯ ನಿಲುವುಹಲವು ದಶಕಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿರುವಾಗ, ಈಗ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಎಷ್ಟು ಪರಿಣಾಮಕಾರಿಯಾಗಲಿದೆ ಎನ್ನುವುದು ಒಂದು ಪ್ರಶ್ನೆಯಾಗಿದೆ. ಈಗ ಇದೇ ರೀತಿ ಮತಕ್ಷೇತ್ರದಲ್ಲಿ ಕೆಲಸ ಮಾಡದವರು, ಸಂಸತ್ತಿಗೆ ಹಾಜರಾಗದೇ ಇರುವವರು, ಸಂಸತ್ತಿಗೆ ತಡವಾಗಿ ಬರುವ ಸಂಸದರು ಹಾಗೂ ಸಚಿವರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು. |