ಜಾರ್ಖಂಡ್ ಸರ್ಕಾರದಿಂದ 25 ರಿಂದ 50 ವರ್ಷ ವಯಸ್ಸಿನ ಬಡ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿ ಅನುದಾನ

ರಾಂಚಿ (ಜಾರ್ಖಂಡ್) – ರಾಜ್ಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸರ್ಕಾರವು 25 ರಿಂದ 50 ವರ್ಷದೊಳಗಿನ ಬಡ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡಲಿದೆ. ಈ ಯೋಜನೆಯಿಂದ 40 ಲಕ್ಷ ಮಹಿಳೆಯರಿಗೆ ಲಾಭ ಆಗಲಿದೆ. ಈ ಯೋಜನೆಯಿಂದ ವರ್ಷಕ್ಕೆ 4 ಸಾವಿರ ಕೋಟಿ ರೂಪಾಯಿಗೂ ಅಧಿಕ ಖರ್ಚಾಗಬಹುದು. ‘ಮುಖ್ಯಮಂತ್ರಿ ಸಹೋದರಿ-ಮಗಳು ಸ್ವಾವಲಂಬನ ಪ್ರೊತ್ಸಾಹ ಯೋಜನಾ’ ಹೆಸರಿನ ಈ ಯೋಜನೆಯನ್ನು ಜುಲೈ 1 ರಿಂದ ಪ್ರಾರಂಭವಾಗಲಿದೆ. ಸರ್ಕಾರ ಶೀಘ್ರದಲ್ಲೇ ಶಿಬಿರ ಆಯೋಜಿಸಿ ಅರ್ಜಿಗಳನ್ನು ತೆಗೆದುಕೊಳ್ಳಲಿದೆ. ಅರ್ಜಿಯ ಪ್ರಕ್ರಿಯೆ ಜುಲೈನಲ್ಲಿ ಪೂರ್ಣಗೊಳ್ಳುವಂತೆ ನಿಯೋಜಿಸಲಾಗಿದೆ. ಈ ಯೋಜನೆಯ ಮೂಲಕ ಆಗಸ್ಟ್‌ನಿಂದ ಮಹಿಳೆಯರ ಖಾತೆಗಳಿಗೆ ಹಣ ರವಾನೆವಾಗಬಹುದು.