ಭಾಗ್ಯನಗರ (ತೆಲಂಗಾಣ) – 35 ವರ್ಷದ ತಂದೆಯೊಬ್ಬನಿಗೆ ಅಶ್ಲೀಲ ಚಲನಚಿತ್ರ ನೋಡುವ (ಪೋರ್ನ್) ಚಟವಿತ್ತು, ಅವನು ತನ್ನ 13 ವರ್ಷದ ಮಗಳನ್ನು ಕಾಡಿಗೆ ಕರೆದೊಯ್ದು ಬಲಾತ್ಕಾರಕ್ಕೆ ಪ್ರಯತ್ನಿಸಿದನು. ಇದನ್ನು ತಾಯಿಗೆ ತಿಳಿಸುವುದಾಗಿ ಮಗಳು ಬೆದರಿಕೆ ಹಾಕಿದಾಗ ತಂದೆ ಅವಳ ಮೇಲೆ ಹಲ್ಲೆ ಮಾಡಿದನು.ತಂದೆಯ ಹೊಡೆತಕ್ಕೆ ಅವಳು ತನ್ನ ಪ್ರಜ್ಞೆ ಕಳೆದುಕೊಂಡಳು. ಇಷ್ಟಕ್ಕೇ ನಿಲ್ಲದ ತಂದೆ ಹಲವು ಬಾರಿ ಮಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದನು. ನಂತರ ಆಕೆಯನ್ನು ಅದೇ ಸ್ಥಿತಿಯಲ್ಲಿ ಬಿಟ್ಟು ಮನೆಗೆ ಹೋದನು. ಈ ಘಟನೆ ಬಗ್ಗೆ ಸುಳಿವು ಸಿಕ್ಕಾಗ ಪೊಲೀಸರು ಹಂತಕನನ್ನು ಬಂಧಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿದಾಗ ಅವರ ಸಂಕೇತ ಸ್ಥಳ೯ವೆಬ್ ಸೈಟ್) ಸ್ಥಗಿತಗೊಂಡಿತ್ತು, ನಗರದಲ್ಲಿರುವ ಅನ್ಯ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದಾಗ ಆ ನಂಬರ್‌ಗಳು ಕೂಡ ಸ್ಥಗಿತಗೊಂಡಿದ್ದವು. (ಹೈದರಾಬಾದ್ ಪೋಲೀಸರ ದುರಾವಸ್ಥೆ ! – ಸಂಪಾದಕರು)
ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿಗೆ ‘ಪೋರ್ನ್ ಫಿಲಂ’(ಅಶ್ಲೀಲ ಚಿತ್ರ) ನೋಡುವ ಅಭ್ಯಾಸವಿತ್ತು. ಪೊಲೀಸರಿಗೆ ಈ ಪ್ರಕರಣದಲ್ಲಿ ಒಂದು ಸಿಸಿಟಿವಿ ದೃಶ್ಯಾವಳಿ ಸಿಕ್ಕಿದ್ದು, ಅದರಲ್ಲಿ ಆರೋಪಿ ಹಾಗೂ ಆತನ ಮಗಳು ಕಾಡಿನಲ್ಲಿ ನಡೆಯುತ್ತಿರುವುದು ಸೆರೆಯಾಗಿದೆ. ಭಾಗ್ಯನಗರದ ಮಿಯಾಪುರದಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿ ದೂರು ನೀಡಿದ್ದನು. ಮತ್ತು ನಿರಂತರವಾಗಿ ‘ಮಗಳು ಸಿಕ್ಕಿದಳೇ?’ ಎಂದು ಪೊಲೀಸರನ್ನು ವಿಚಾರಿಸುತ್ತಿದ್ದನು. ಮೇ 14 ರಂದು ಈ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿಯಾಪುರ ಉಪ ಪೊಲೀಸ್ ಆಯುಕ್ತ ಪಿ. ನರಸಿಂಹ ರಾವ್ ಅವರು ಮಾತನಾಡಿ, ಈ ಕುಟುಂಬ ಮೆಹಬೂಬ್ ನಗರದಿಂದ ಬಂದಿದ್ದು, ಬಾಲಕಿಯ ತಾಯಿ ದಿನಗೂಲಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಕುಸಿಯುತ್ತಿರುವ ಸಮಾಜದ ನೈತಿಕತೆ ! ಸಾಧನೆ ಮಾಡದಿರುವ ಸಮಾಜವು ಭೌತಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಗಮನಿಸಬೇಕು ! |