ಇಲ್ಲಿಯವರೆಗೆ ದೊರೆತ ಇತಿಹಾಸದಲ್ಲಿಯೇ ಅತ್ಯಂತ ಸುಂದರ ಪ್ರತಿಮೆ
ಬುಲ್ಡಾಣಾ – ಸಿಂಧಖೇಡ್ ರಾಜಾ ಪಟ್ಟಣದಲ್ಲಿರುವ ಐತಿಹಾಸಿಕ ರಾಜೆ ಲಖುಜಿರಾವ್ ಜಾಧವ್ ಅವರ ಸಮಾಧಿಯ ಪರಿಸರದ ಜೀರ್ಣೋದ್ಧಾರ ಮತ್ತು ಸಂರಕ್ಷಣೆಯ ಕಾರ್ಯವು ಹಲವಾರು ತಿಂಗಳುಗಳಿಂದ ನಡೆಯುತ್ತಿದೆ. ಅವರ ಸಮಾಧಿಯ ಮುಂಭಾಗದಲ್ಲಿ ಉತ್ಖನನ ಮಾಡುವಾಗ, ಶ್ರೀ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಭವ್ಯವಾದ ವಿಗ್ರಹಗಳು ಸಿಕ್ಕಿವೆ. ಈ ಸುಂದರ ಮತ್ತು ಆಕರ್ಷಕ ವಿಗ್ರಹವು ಇಲ್ಲಿಯವರೆಗಿನ ಇತಿಹಾಸದಲ್ಲಿ ಸಿಕ್ಕಂತಹ ಎಲ್ಲಕ್ಕಿಂತ ಅತ್ಯಂತ ಸುಂದರವಾದ ವಿಗ್ರಹವಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಗ್ರಹಗಳು ಸುಮಾರು ಹನ್ನೊಂದನೇ ಶತಮಾನದ್ದು ಇರಬಹುದೆಂದು ಹೇಳಲಾಗಿದೆ.
ಮುಂಬರುವ ದಿನಗಳಲ್ಲಿ ಈ ಪ್ರದೇಶದ ಸಂಪೂರ್ಣ ಉತ್ಖನನ ಮಾಡಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕರಾದ ಅರುಣ್ ಮಲಿಕ್ ಅವರು ತಿಳಿಸಿದ್ದಾರೆ.