ಬೆಂಗಳೂರಿನಲ್ಲಿ ಅಮೆಜಾನ್ ಪಾರ್ಸೆಲ್‌ನಲ್ಲಿ ಜೀವಂತ ನಾಗರ ಹಾವು ಪತ್ತೆ !

ಗ್ರಾಹಕರಲ್ಲಿ ಕ್ಷಮೆಯಾಚಿಸಿ ಮರುಪಾವತಿ ಮಾಡಿದ ಅಮೆಜಾನ್ !

ಬೆಂಗಳೂರು – ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಉತ್ಪನ್ನದ ಪಾರ್ಸೆಲ್ ಬಾಕ್ಸ್‌ನಲ್ಲಿ ಜೀವಂತ ನಾಗರ ಹಾವು ಪತ್ತೆಯಾಗಿದೆ. ಮಹಿಳೆ ಪೆಟ್ಟಿಗೆಯನ್ನು ತೆರೆದಾಗ, ನಾಗರ ಹಾವು ಹೊರಬಂದಿತು; ಆದರೆ ಪೆಟ್ಟಿಗೆಯಲ್ಲಿದ್ದ ‘ಪ್ಯಾಕೇಜಿಂಗ್ ಟೇಪ್’ನಲ್ಲಿ ಸಿಕ್ಕಿಹಾಕಿಕೊಂಡಿತು. ಯಾವುದೇ ಹಾನಿಯಾಗಿಲ್ಲ. ನಂತರ ಸ್ಥಳೀಯರು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಅಮೆಜಾನ್ ಮಹಿಳೆಗೆ ಕ್ಷಮೆ ಯಾಚಿಸಿ ಸಂಪೂರ್ಣ ಹಣ ವಾಪಸ್ ನೀಡಿದೆ.

ಮಹಿಳೆಯು, ಅಮೆಜಾನ್ ನ ಕಳಪೆ ಸಾರಿಗೆ ವ್ಯವಸ್ಥೆ, ಅನೈರ್ಮಲ್ಯ ಗೋದಾಮು ಹಾಗೂ ನಿರ್ವಹಣೆಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.