`ಜಿ-7’ ಶೃಂಗ ಸಮ್ಮೇಳನದಲ್ಲಿ ನಮ್ಮನ್ನು ಅವಮಾನ ಮಾಡಲಾಯಿತಂತೆ ! – ಚೀನಾ

ಬೀಜಿಂಗ್ – ದಕ್ಷಿಣ ಇಟಲಿಯ ಅಪುಲಿಯಾ ನಗರದಲ್ಲಿ ನಡೆದ `ಜಿ-7’ (ಜಿ-7 ಅಂದರೆ ಅಮೇರಿಕಾ, ಬ್ರಿಟನ್, ಕೆನಡಾ, ಜರ್ಮನಿ, ಇಟಲಿ, ಜಪಾನ್ ಮತ್ತು ಫ್ರಾನ್ಸ್, ಈ ಏಳು ದೇಶಗಳಿಂದ ರಚಿಸಲ್ಪಟ್ಟ ಮಂಡಳಿ) ಶೃಂಗಸಮ್ಮೇಳನದಲ್ಲಿ ನಮ್ಮನ್ನು ಅವಮಾನಿಸಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಆರೋಪಿಸಿದ್ದಾರೆ. ‘ಜಿ-7’ ಶೃಂಗಸಭೆಯಲ್ಲಿ ಚೀನಾ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಲಿನ್ ಜಿಯಾನ್ ಪತ್ರಿಕಾಗೋಷ್ಠಿ ನಡೆಸಿದರು. ಲಿನ್ ಜಿಯಾನ್ ಮಾತನಾಡಿ, “ಜಿ-7 ಶೃಂಗಸಮ್ಮೇಳನದ ನಾಯಕರು ಚೀನಾವನ್ನು ನಿಷೇಧಿಸಿದರು. ಈ ಸಭೆಯಲ್ಲಿ ಚೀನಾ ವಿರುದ್ಧ ಆಧಾರರಹಿತ ಆರೋಪ ಮಾಡಲಾಯಿತು.

ಈ `ಜಿ-7’ ಗುಂಪು ಜಗತ್ತನ್ನು ಪ್ರತಿನಿಧಿಸುವುದಿಲ್ಲ. ಈ 7 ದೇಶಗಳು ವಿಶ್ವದ ಶೇಕಡಾ ೧೦ ರಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿವೆ. ಒಂದು ವೇಳೆ ಈ ಎಲ್ಲರನ್ನೂ ಒಂದುಗೂಡಿಸಿದರೂ, ಜಾಗತಿಕ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಚೀನಾಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಜಿ-7 ದೀರ್ಘ ಕಾಲದಿಂದ ತನ್ನ ಧ್ಯೇಯದಿಂದ ವಿಮುಖವಾಗಿದೆ. ಇದು ಅಮೇರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ವರ್ಚಸ್ಸು ರಕ್ಷಿಸಲು ರಾಜಕೀಯ ಅಸ್ತ್ರವಾಗಿದೆ ಎಂದು ಖಾರವಾಗಿ ನುಡಿದರು.

ಸಂಪಾದಕೀಯ ನಿಲುವು

ಇಟಲಿಯಲ್ಲಿ ಇತ್ತೀಚೆಗೆ ನಡೆದ `ಜಿ-7’ ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೊನಿಯವರು, ಭಾರತ ಈ ಸಮ್ಮೇಳನದ ಸದಸ್ಯರಲ್ಲದಿದ್ದರೂ ಭಾರತದ ಪ್ರಧಾನ ನರೇಂದ್ರ ಮೋದಿಯವರನ್ನು ಆಮಂತ್ರಿಸಿದ್ದರು. ಇದರಿಂದ ಚೀನಾಕ್ಕೆ ಅಸೂಯೆಯಾಗಿಲ್ಲವೆಂದು ಹೇಳಬಹುದೇ?