ಚೈಬಾಸಾ (ಜಾರ್ಖಂಡ್) – ರಾಜ್ಯದ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಜೂನ್ 17 ರ ಮುಂಜಾನೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ. ಅವರಲ್ಲಿ ಒಬ್ಬ ಮಹಿಳೆ ಸೇರಿದ್ದಾಳೆ. ಈ ವೇಳೆ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ರಾಜಧಾನಿ ರಾಂಚಿಯಿಂದ 200 ಕಿ.ಮೀ ದೂರದಲ್ಲಿರುವ ಲಿಪುಂಗಾ ವಿಭಾಗದಲ್ಲಿ ಚಕಮಕಿ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಅಮೋಲ್ ಹೋಮ್ಕರ್ ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ರೈಫಲ್‌ಗಳು, ಪಿಸ್ತೂಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಮಾವೋವಾದಿಗಳು ಈಗ ಕೆಲವು ಪ್ರದೇಶಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆಡಳಿತವು ಹತ್ಯೆಗೀಡಾದ ಮಾವೋವಾದಿಗಳ ಪೈಕಿ ಕಾಂದೆ ಹೊನ್ಹಾಗೆ 5 ಲಕ್ಷ, ಸಿಂಘರಾಯ್‌ಗೆ 10 ಲಕ್ಷ ಮತ್ತು ಸೂರ್ಯನಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಸಂಪಾದಕೀಯ ನಿಲುವುಕಳೆದ ಕೆಲವು ವರ್ಷಗಳಲ್ಲಿ, ಭದ್ರತಾ ಏಜೆನ್ಸಿಗಳು ನಕ್ಸಲಿಸಂ ಅನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈಗ ಅದರ ಸಂಪೂರ್ಣ ವಿನಾಶಕ್ಕೆ ಪ್ರಯತ್ನಿಸುವುದು ಅವಶ್ಯಕ! |