ಭಾರತ-ಶ್ರೀಲಂಕಾ ನಡುವೆ ಸೇತುವೆ ನಿರ್ಮಾಣದ ಸಿದ್ಧತೆ! – ಶ್ರೀಲಂಕಾ ಅಧ್ಯಕ್ಷ

ಕೊಲಂಬೊ – ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸಲು ಸಮುದ್ರ ಸೇತುವೆಯನ್ನು ನಿರ್ಮಿಸುವ ಸಿದ್ಧತೆ ಪ್ರಾರಂಭವಾಗುತ್ತಿದೆ. ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಮಾತನಾಡಿ, ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಸ್ತಾವಿತ ‘ಭೂ-ಲಿಂಕ್’ ಸಂದರ್ಭದಲ್ಲಿ ಅಭ್ಯಾಸ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಈ ವಾರದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದು, ಆ ವೇಳೆ ಈ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ರಾನಿಲ್ ವಿಕ್ರಮಸಿಂಘೆ ಮಾತನಾಡುತ್ತಾ,

1. ಭಾರತಕ್ಕೆ ಹೆಚ್ಚುವರಿ ಇಂಧನವನ್ನು ಮಾರಾಟ ಮಾಡುವ ಉಪಕ್ರಮದ ಮೇಲೆಯೂ ಸಚಿವರ ಸಭೆಯಲ್ಲಿ ಚರ್ಚಿಸಲಾಗುವುದು.

2. ಜುಲೈ 2023 ರಂದು ಭಾರತ ಭೇಟಿಯ ಸಮಯದಲ್ಲಿ ವಿಕ್ರಮಸಿಂಘೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಸಭೆಯಲ್ಲಿ ಉಭಯ ದೇಶಗಳ ನಡುವೆ ನಿರ್ಮಿಸಲಿರುವ ಸೇತುವೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದರು.

3. ಭಾರತ-ಶ್ರೀಲಂಕಾ ನಡುವೆ ಸೇತುವೆ ನಿರ್ಮಾಣವಾದರೆ ರಾಮಾಯಣ ಕಾಲದ ನಂತರ ನಿರ್ಮಾಣಗೊಂಡ ಎರಡು ದೇಶಗಳನ್ನು ಸಂಪರ್ಕಿಸುವ ಮೊದಲ ಸೇತುವೆ ಇದಾಗಲಿದೆ. ರಾಮಾಯಣದ ಸಮಯದಲ್ಲಿ, ಶ್ರೀರಾಮನು ಶ್ರೀಲಂಕಾಕ್ಕೆ ಹೋಗಲು ಸಮುದ್ರಕ್ಕೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದ ವಿವರಣೆಯಿದೆ, ಇದನ್ನು ‘ರಾಮ ಸೇತು’ ಎಂದು ಕರೆಯಲಾಗುತ್ತದೆ. (ಭಾರತ ಮತ್ತು ಶ್ರೀಲಂಕಾ ನಡುವೆ ಸೇತುವೆಯನ್ನು ನಿರ್ಮಿಸುವಾಗ ರಾಮಾಯಣ ಕಾಲದ ‘ರಾಮಸೇತು’ಗೆ ಹಾನಿಯಾಗದಂತೆ ಜಾಗೃತೆ ವಹಿಸಬೇಕು ಎನ್ನುವುದೇ ಭಾರತದ ಸಾಮಾನ್ಯ ನಾಗರಿಕರ ಅಪೇಕ್ಷೆ! – ಸಂಪಾದಕರು.)