Mohan Bhagwat Yogi Meeting : ಒಂದೇ ದಿನದಲ್ಲಿ ಎರಡು ಬಾರಿ ಭೇಟಿಯಾದ ಸರಸಂಘಚಾಲಕರು ಮತ್ತು ಮುಖ್ಯಮಂತ್ರಿ ಯೋಗಿ !

ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫಲಿತಾಂಶದ ಬಗ್ಗೆ ಚರ್ಚೆ ನಡೆದ ಅಂದಾಜಿದೆ !

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ. ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ್ , ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಗೋರಖ್‌ಪುರ (ಉತ್ತರ ಪ್ರದೇಶ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ. ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ್ ಅವರು ಪ್ರಸ್ತುತ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದು, ಜೂನ್ 15 ರಂದು ಅವರು ಗೋರಖ್‌ಪುರದಲ್ಲಿದ್ದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚೆ ನಡೆಸಿದರು.

ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಫಲಿತಾಂಶದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆಯ ಫಲಿತಾಂಶದ ನಂತರ ಸಂಘದ ಮುಖವಾಣಿಯು ಬಿಜೆಪಿಯನ್ನು ಟೀಕಿಸಿದ ಹಿನ್ನೆಲೆಯಲ್ಲಿ ಈ ಭೇಟಿ ತೀವ್ರ ಮಹತ್ವ ಪಡೆದಿದೆ.

ಕುತೂಹಲಕಾರಿ ವಿಷಯವೆಂದರೆ ಗೋರಖ್‌ಪುರದಲ್ಲಿರುವಾಗ, ಪ.ಪೂ. ಸರಸಂಘಚಾಲಕರು ಮತ್ತು ಯೋಗಿ ಆದಿತ್ಯನಾಥ್ ಅವರು ಎರಡು ಬಾರಿ ಭೇಟಿಯಾದರು. ಗೋರಖ್‌ಪುರದ ಕೈಪಿಯರ್‌ಗಂಜ್ ಮತ್ತು ಪಕ್ಕಿಬಾಗ್‌ನಲ್ಲಿರುವ ಶಾಲೆಯಲ್ಲಿ ಉಭಯ ನಾಯಕರು ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಚರ್ಚೆ ನಡೆಸಿದರು. ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯ ಪ್ರಕಾರ, ಪ. ಪೂ.ಸರಸಂಘಚಾಲಕರು ಗೋರಖ್‌ಪುರಕ್ಕೆ ಬಂದು ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿದ್ದು ಸಾಮಾನ್ಯ ವಿಷಯವಲ್ಲ ಎಂದಿದ್ದಾರೆ.