ಇಂದಿರಾ ಗಾಂಧಿ ‘ಮದರ್ ಆಫ್ ಇಂಡಿಯಾ’ ! (ಅಂತೆ) – ಭಾಜಪದ ಕೇಂದ್ರ ಸಚಿವ ಸುರೇಶ ಗೋಪಿ

ಕೇರಳದಿಂದ ಆಯ್ಕೆಯಾಗಿ ಬಂದಿರುವ ಭಾಜಪದ ಕೇಂದ್ರ ಸಚಿವ ಸುರೇಶ ಗೋಪಿ ಇವರ ಹೇಳಿಕೆ

ತಿರುವನಂತಪುರಂ (ಕೇರಳ) – ಕೇರಳದಲ್ಲಿ ಮೊದಲು ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾಜಪಾಗೆ ಗೆಲುವುಗಳಿಸಿ ಕೊಟ್ಟಿರುವ ಮತ್ತು ಕೇಂದ್ರದಲ್ಲಿ ಸಚಿವರಾಗಿರುವ ಸುರೇಶ ಗೋಪಿ ಇವರು ಇಂದಿರಾ ಗಾಂಧಿ ಇವರಿಗೆ ‘ಮದರ ಆಫ್ ಇಂಡಿಯಾ’ ಎಂದು ಹೇಳಿದ್ದಾರೆ. ಹಾಗೂ ಕೇರಳದ ದಿವಂಗತ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಇವರನ್ನು ‘ಉತ್ತಮ ಆಡಳಿತಗಾರೆಂದು’ ಹೇಳಿದ್ದಾರೆ. ಇದರ ಜೊತೆಗೆ ಸುರೇಶ ಗೋಪಿ ಇವರು ಹಿರಿಯ ಮಾರ್ಕ್ಸ್ ವಾದಿ ನಾಯಕ ಈ.ಕೆ. ನಯನಾರ್ ಇವರನ್ನು ಅವರ ‘ರಾಜಕೀಯ ಗುರು’ ಎಂದು ಹೇಳಿದ್ದಾರೆ. ‘ಕೇರಳದಲ್ಲಿ ಕೆ. ಕರುಣಾಕರನ್ ಮತ್ತು ಈ.ಕೆ.ನ ಯನಾರ್ ಇಬ್ಬರು ನಾಯಕರು ನನ್ನ ರಾಜಕೀಯ ಮಾರ್ಗಕ್ರಮಣದ ಮೇಲೆ ಪ್ರಭಾವ ಬೀರಿದ್ದಾರೆ, ಎಂದು ಸುರೇಶ ಗೋಪಿ ಇವರು ಹೇಳಿದ್ದಾರೆ. ಕೇಂದ್ರ ಸಚಿವ ಸ್ಥಾನದ ಪ್ರಮಾಣವಚನ ನೀಡಿದ ನಂತರ ಸುರೇಶ ಗೋಪಿ ಇವರು ಕೇರಳದಲ್ಲಿನ ಪುನಕುನ್ನಂ ಇಲ್ಲಿಯ ಕರುಣಾಕರನ್ ಇವರ ‘ಮುರಳಿ ಮಂದಿರ’ ಈ ಸ್ಮಾರಕಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದರು.

ಸಂಪಾದಕೀಯ ನಿಲುವು

ಗೋ ಹತ್ಯೆ ನಿಷೇಧದ ಆಗ್ರಹಕ್ಕಾಗಿ ದೆಹಲಿಯಲ್ಲಿನ ಸಂಸದ ಭವನದ ಹೊರಗೆ ಅಹಿಂಸೆಯ ಮಾರ್ಗದಿಂದ ಪ್ರತಿಭಟನೆ ನಡೆಸುವ ಸಾಧು-ಸಂತರ ಮೇಲೆ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ್ದ ಇಂದಿರಾ ಗಾಂಧಿ ಎಂದಾದರು ‘ಮದರ್ ಆಫ್ ಇಂಡಿಯಾ’ ಆಗಲು ಸಾಧ್ಯವೇ ?

‘ಭಾಜಪದವರಾಗಿದ್ದರೂ ಸುರೇಶ ಗೋಪಿ ಇವರ ಕೇರಳದಲ್ಲಿ ಹೇಗೆ ಗೆಲುವು ಸಾಧಿಸಿದ್ದಾರೆ ? ಇದರ ಉತ್ತರ ಈ ಹೇಳಿಕೆಯಿಂದ ಸಿಗುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನು ಇಲ್ಲ ?