Yogi On Eid : ಬಕರೀದ್ ಗೆ ರಸ್ತೆಯಲ್ಲಿ ನಮಾಜ ಪಠಣೆ ಮಾಡಲು ಬಿಡಬೇಡಿ !

  • ಅಧಿಕಾರಿಗಳಿಗೆ ಆದೇಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

  • ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು; ಅದಕ್ಕಾಗಿ ಜಾಗರೂಕವಾಗಿರಲು ಆದೇಶ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಜೂನ್ ೧೭ ರ ಬಕರೀದ್ ದಿನದಂದು ರಾಜ್ಯದಲ್ಲಿ ಎಲ್ಲಿಯೂ ರಸ್ತೆಯಲ್ಲಿ ನಮಾಜ ಪಠಣೆ ನಡೆಯಬಾರದು, ಹಾಗೂ ನಿಷೇಧಿತ ಪ್ರಾಣಿಗಳ ಬಲಿ ಕೂಡ ನೀಡಬಾರದು, ಇದಕ್ಕಾಗಿ ಜಾಗರೂಕರಾಗಿರಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಭೆಯೊಂದರಲ್ಲಿ ತಮ್ಮ ಎಲ್ಲಾ ಅಧಿಕಾರಿಗೆ ಆದೇಶ ನೀಡಿದ್ದಾರೆ. ನಿಷೇಧಿತ ಪ್ರಾಣಿಗಳ ಬಲಿ ನೀಡಿದರೆ ಸಂಬಂಧಿತರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ಲಕ್ಷ್ಮಣಪುರಿಯ ಈದಗಾಹ (ನಮಾಜ ಪಠಣೆ ಮಾಡುವ ಸ್ಥಳ) ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವರು) ಮೌಲಾನಾ(ಇಸ್ಲಾಮಿನ ಅಧ್ಯಯನಕಾರ) ಖಾಲಿದ್ ರಶೀದ್ ಫಿರಂಗಿ ಮೈಲಿ ಅವರು ಬಕರೀದ್ ದಿನದಂದು ಬಲಿ ನೀಡುವ ಬಗ್ಗೆ ಮುಸಲ್ಮಾನರಿಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಲಿ ನೀಡಿರುವ ಪ್ರಾಣಿಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡಬೇಡಿ. ಬಲಿ ನೀಡಿದ ನಂತರ ಅವಶೇಷಗಳು ಮತ್ತು ಇತರ ಕಸವನ್ನು ಸಾರ್ವಜನಿಕ ಕಸದ ಬುಟ್ಟಿಗೆ ಹಾಕಿ. ಮುಸಲ್ಮಾನರು ಈದಗಾಹದ ಸ್ಥಳದಲ್ಲಿಯೇ ನಮಾಜ ಪಠಣೆ ಮಾಡಬೇಕು. ಹಾಗೂ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ ಹೆಲ್ಪ್ ಲೈನ್ ಕ್ರಮಾಂಕ ಪ್ರಸಾರ ಮಾಡಲಾಗಿದ್ದು, ಅದರಲ್ಲಿ ಬಕರೀದ್ ವೇಳೆ ನೀಡಲಾಗುವ ಬಲಿಯ ಬಗ್ಗೆ ನಿಮಗಿರುವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಆದೇಶ ದೇಶದಲ್ಲಿನ ಪ್ರತಿಯೊಬ್ಬ ಮುಖ್ಯಮಂತ್ರಿಗಳು ಏಕೆ ನೀಡುವುದಿಲ್ಲ ? ಮತ್ತು ಈ ರೀತಿಯ ಆದೇಶವಾದರೂ ಏಕೆ ನೀಡಬೇಕಾಗುತ್ತದೆ ? ಸರಕಾರ, ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ ?