ನ್ಯೂಯಾರ್ಕ್ – ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಪರ್ಧೆ ನಡೆದಿರುವಾಗ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋ ದೇವಿಯ ದರ್ಶನಕ್ಕಾಗಿ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಈ ದಾಳಿಯಲ್ಲಿ 9 ಭಕ್ತರು ಸಾವನ್ನಪ್ಪಿದ್ದು, 41 ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಅನ್ನು ಪ್ರಸಾರ ಮಾಡಿ ಈ ದಾಳಿಯನ್ನು ಖಂಡಿಸಿದ್ದಾರೆ. ಇದರಲ್ಲಿ ಅವರು ‘ಆಲ್ ಆಯಿಸ್ ಆನ್ ವೈಷ್ಣೋದೇವಿ (ಎಲ್ಲ ಕಣ್ಣುಗಳು ವೈಷ್ಣೋದೇವಿ ಮೇಲೆ)’ ಎಂದಿದ್ದಾರೆ. ಪ್ಯಾಲೆಸ್ತೀನ್‌ನಲ್ಲಿ ರಫಾ ಮೇಲೆ ಇಸ್ರೇಲ್ ನಡೆಸಿದ ದಾಳಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ‘ಆಲ್ ಆಯಿಸ್ ಆನ್ ರಫಾಹ (ಎಲ್ಲ ಕಣ್ಣುಗಳು ರಫಾಹ್ ಮೇಲೆ )’ ಹೆಚ್ಚು ಚರ್ಚಿಸಲಾಗಿತ್ತು. ಕಳೆದ 5 ದಿನಗಳಲ್ಲಿ ಭಾರತದ ಸಾಮಾನ್ಯ ನಾಗರಿಕರು , ‘ಆಲ್ ಆಯಿಸ್ ಆನ್ ವೈಷ್ಣೋದೇವಿ (ಎಲ್ಲ ಕಣ್ಣುಗಳು ವೈಷ್ಣೋದೇವಿಯ ಮೇಲೆ)’ ಎಂಬ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಕ್ಕಾಗಿ ಪಾಕಿಸ್ತಾನದ ವೇಗದ ಬೌಲರ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಗೆ ಒಳಗಾಗಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಕೆಲವರು ಅವರ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಎಷ್ಟು ಭಾರತೀಯ ಆಟಗಾರರು ಈ ದಾಳಿಯನ್ನು ಪ್ರತಿಭಟಿಸಿದ್ದಾರೆ ? |