Punjab And Haryana HC : ಪಂಜಾಬ್ ಮತ್ತು ಹರಿಯಾಣ ಉಚ್ಚನ್ಯಾಯಾಲಯದಿಂದ 50 ಸಾವಿರ ರೂಪಾಯಿ ದಂಡ !

  • ವಾಟ್ಸಾಪ್ ಗ್ರೂಪ್‌ನಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಸಾರ ಮಾಡಿದ ವಕೀಲ

  • ಆರೋಪಿಯ ನಡವಳಿಕೆ ಮೇಲೆ ನಿಗಾ ಇಡಲು ಬಾರ್ ಕೌನ್ಸಿಲ್ ಗೆ ನಿರ್ದೇಶನ !

ಚಂಡೀಗಢ – ವಾಟ್ಸಾಪ್ ಗ್ರೂಪ್‌ನಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಉಚ್ಚನ್ಯಾಯಾಲಯವು ಓರ್ವ ವಕೀಲರನ್ನು ಅಪರಾಧಿ ಎಂದು ತೀರ್ಮಾನಿಸಿ ಅವರಿಗೆ 50,000 ರೂಪಾಯಿ ದಂಡ ವಿಧಿಸಿದೆ. ಈ ವಕೀಲನ ಹೆಸರು ಪ್ರೀತ್ಪಾಲ್ ಸಿಂಗ್ ಎಂದಾಗಿದ್ದು, ಈತನ ಕೆಲಸ ಮತ್ತು ನಡವಳಿಕೆಯ ಬಗ್ಗೆ ನಿಗಾ ಇಡುವಂತೆ ಬಾರ್ ಕೌನ್ಸಿಲ್‌ಗೆ ಉಚ್ಚನ್ಯಾಯಾಲಯವು ಸೂಚಿಸಿದೆ. ಎರಡೂ ಪಕ್ಷಗಳ ನಡುವಿನ ತಿಳಿವಳಿಕೆ ಒಪ್ಪಂದದ ಆಧಾರದ ಮೇಲೆ ಅಪರಾಧವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಕುಲದೀಪ್ ತಿವಾರಿ, ಭವಿಷ್ಯದಲ್ಲಿ, ಅರ್ಜಿದಾರ-ಆರೋಪಿ ಇದೇ ರೀತಿಯ ಅಪರಾಧವನ್ನು ಮಾಡಿದರೆ, ಅವರ ವಿರುದ್ಧ ಸೂಕ್ತ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರೀತ್ಪಾಲ್ ಸಿಂಗ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಇನ್ನೊಬ್ಬ ವಕೀಲ ಅಶೋಕ ಸರೀನ ಅವರು ದೂರು ದಾಖಲಿಸಿದ್ದರು. ಸಿಂಗ್ ವಿರುದ್ಧ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಈ ಪ್ರಕರಣದಲ್ಲಿ ಕಕ್ಷಿದಾರರು ಇತ್ಯರ್ಥ ಒಪ್ಪಂದವನ್ನು ಮಾಡಿಕೊಂಡರು ಹೀಗಾಗಿ ಪ್ರಕರಣವನ್ನು ವಜಾಗೊಳಿಸುವ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.