ಪುಣೆ – ಕಲ್ಯಾಣಿನಗರ “ಪೋರ್ಷೆ” ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಗಳ ರಕ್ತದ ಮಾದರಿಗಳನ್ನು ಬದಲಾಯಿಸಿದ ಪ್ರಕರಣದಲ್ಲಿ ಸಾಸೂನ್ ಆಸ್ಪತ್ರೆಯ ಡಾ. ಅಜಯ್ ತಾವೆರೆ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಡಾ. ತಾವರೆ ಇವರೇ ಮರಣೋತ್ತರ ಪರೀಕ್ಷೆ ನಡೆಸಿದ್ದು ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶ ಮಾಡಿರುವ ಬಗ್ಗೆ ಅವರ ಮೇಲೆ ಸಂದೇಹವಿದೆ ಎಂದು ‘ಹಿಂದೂಸ್ಥಾನ್ ಪೋಸ್ಟ್’ ವೆಬ್‌ಸೈಟ್ ಪ್ರಸಾರ ಮಾಡಿದೆ.
ಈ ವರದಿಯಲ್ಲಿ,
1. ಸಸೂನ್ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾಗಿರುವುದರಿಂದ ಆರೋಪಿಗಳ ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ, ಕೊಲೆ ಅಥವಾ ಅಪಘಾತದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ವರದಿಗಳು ಈ ಆಸ್ಪತ್ರೆಯಲ್ಲೇ ತಯಾರಿಸಲಾಗುತ್ತದೆ ಮತ್ತು ಈ ವರದಿಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಸ್ವೀಕರಿಸಲಾಗುತ್ತದೆ.
2. ಡಾ. ದಾಭೋಲ್ಕರ್ ಹತ್ಯೆಯಾದಾಗ ಅವರ ಶವಪರೀಕ್ಷೆಯನ್ನು ಡಾ. ತಾವರೆ ಇವರೇ ಮಾಡಿದ್ದು. ಅವರು ನೀಡಿದ ಮರಣೋತ್ತರ ಪರೀಕ್ಷೆಯ ವರದಿಯ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು ಹಲವು ಪ್ರಶ್ನೆಗಳನ್ನು ಎತ್ತಿದರು. ಈ ವರದಿಯಲ್ಲಿ ಬಹಿರಂಗ ಮರೆಮಾಚುವಿಕೆ ಇದೆ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
3. ಶವಪರೀಕ್ಷೆ ಸಂದರ್ಭದಲ್ಲಿ ಡಾ. ದಾಭೋಲ್ಕರ್ ಅವರ ಬಲ ಮೊಣಕಾಲು ಮತ್ತು ಮುಂಭಾಗದ ಕಾಲಿನ ಮೇಲೆ ಅವರ ಸಂಬಂಧಿಕರು ತೋರಿಸಿದ ಗಾಯಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಇದನ್ನು ಡಾ. ತಾವೇರೆ ಮರೆಮಾಚಿದರು. ಶವಪರೀಕ್ಷೆಗೂ ಮುನ್ನ ಡಾ. ದಾಭೋಲ್ಕರ್ ಮೃತದೇಹದ ಛಾಯಾಚಿತ್ರ ತೆಗೆಯಲಾಗಿತ್ತು. ಅದರಲ್ಲಿ ಡಾ. ದಾಭೋಲ್ಕರ್ ಅವರ ಕುತ್ತಿಗೆಯಲ್ಲಿ ಉದ್ದನೆಯ ಕೂದಲು ಕಾಣಿಸುತ್ತಿತ್ತು. ಈ ಸಂದರ್ಭದಲ್ಲಿ ಡಾ. ಅಜಯ್ ತಾವರೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅವರು ಇದು ಕೂದಲು ಅಲ್ಲ, ದಾರ ಎಂದು ಹೇಳಿದರು. ಈ ಅತ್ಯಂತ ಮಹತ್ವದ ಸಾಕ್ಷ್ಯವನ್ನು ಇಟ್ಟುಕೊಳ್ಳದೆ, ಡಾ. ಅಜಯ್ ತಾವರೆ ಮರೆಮಾಚಿದರು.
4. ಡಾ. ತಾವರೆ ಇವರು ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ, ಮರಣೋತ್ತರ ಪರೀಕ್ಷೆಯ ನಿಯಮಗಳನ್ನು ಅನುಸರಿಸಿಲ್ಲ ಎಂದು ತಾವರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡರು. ಶವಪರೀಕ್ಷೆಯ ‘ವಿಡಿಯೋ ಚಿತ್ರೀಕರಣ’ ಮಾಡುವಾಗ, ಅವುಗಳನ್ನು ಸತತವಾಗಿ ಮಾಡದೇ ಪ್ರತಿ ಬಾರಿ ನಿಲ್ಲಿಸಲಾಗುತ್ತಿತ್ತು. ಈ ನಿರ್ಧಾರ ಡಾ. ಅಜಯ ತಾವರೆ ನೀಡಿದ್ದರೇ ?, ಎಂಬ ಪ್ರಶ್ನೆ ಈಗ ಈ ಸಂದರ್ಭದಲ್ಲಿ ಎದ್ದಿದೆ.
5. ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಇತರ ಸಾಧ್ಯತೆಗಳಿದ್ದವು. ಶವಪರೀಕ್ಷೆಯನ್ನು ಸರಿಯಾಗಿ ಮಾಡಿದ್ದರೆ, ತನಿಖೆಯು ಇತರ ವಿಷಯಗಳನ್ನು ಬಹಿರಂಗಪಡಿಸಬಹುದು; ಆದರೆ ಡಾ. ಅಜಯ ತಾವರೆ ಅವರ ಸಂದೇಹಾಸ್ಪದ ಶವಪರೀಕ್ಷೆ ವರದಿಯಿಂದ ಅವು ಬೆಳಕಿಗೆ ಬಂದಿಲ್ಲ. ಈ ವಿಷಯಗಳನ್ನು ಡಾ. ಅಜಯ ತಾವರೆ ಉದ್ದೇಶಪೂರ್ವಕವಾಗಿ ಉಲ್ಲೇಖಿಸದ ಕಾರಣ ಈ ಪ್ರಕರಣದ ಪ್ರಮುಖ ಸಾಕ್ಷ್ಯ ನಾಶವಾಗಿದೆ ಎಂದು ಹೇಳಬೇಕಾಗಬಹುದು ಎಂದು ಹೇಳಿದರು.