Statement from RSS Chief: ಮಣಿಪುರದ ಶಾಂತಿಗಾಗಿ ಆದ್ಯತೆ ನೀಡಬೇಕು ! – ಸರಸಂಘಚಾಲಕ

ನಾಗಪುರ – ಮಣಿಪುರವು ಒಂದು ವರ್ಷದಿಂದ ಹೊತ್ತಿ ಉರಿಯುತ್ತಿದೆ. ದ್ವೇಷದ ವಾತಾವರಣ ನಿರ್ಮಾಣ ಮಾಡಿದ್ದರಿಂದ ಮಣಿಪುರದಲ್ಲಿ ಹಾಹಾಕಾರವೆದ್ದಿದೆ. ಮಣಿಪುರ ಶಾಂತಗೊಳಿಸುವುದಕ್ಕಾಗಿ ಆದ್ಯತೆ ನೀಡಬೇಕೆಂದು ಪ.ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ ಇವರು ಪ್ರತಿಪಾದಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ವಿಕಾಸ ವರ್ಗ ೨ರ ಸಮಾರೋಪ ಸಮಾರಂಭ ರೇಷಮೀಬಾಗ ಮೈದಾನದಲ್ಲಿ ನಡೆಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, 

೧. ಸಮಾಜದಲ್ಲಿ ಐಕ್ಯತೆ ಮತ್ತು ಸಂಸ್ಕಾರ ಇರಬೇಕು. ನಮ್ಮ ಸಮಾಜ ವೈವಿದ್ಯತೆಯಿಂದ ಕೂಡಿದೆ; ಆದರೆ ಎಲ್ಲರ ಮೂಲ ಒಂದೇ ಆಗಿದೆ. ಬೇರೆಯವರ ಅಭಿಪ್ರಾಯವನ್ನು ಗೌರವಿಸಬೇಕು. ನಾವು ನಮ್ಮ ಸಹೋದರರನ್ನೇ ಅಸ್ಪೃಶ್ಯರೆಂದು ಪಕ್ಕಕ್ಕೆ ಇಟ್ಟಿದ್ದೇವೆ. ಅದಕ್ಕೆ ವೇದ ಮತ್ತು ಉಪನಿಷತ್ ಗಳಲ್ಲಿ ಆಧಾರವಿಲ್ಲ. ಅಸ್ಪೃಶ್ಯತೆ ಮತ್ತು ಭೇದಭಾವ ಕಾಲತೀತವಾಗಿದೆ. ಸಮಾಜದಲ್ಲಿ ಅನ್ಯಾಯ ನಡೆದಿರುವುದರಿಂದ ಪರಸ್ಪರರ ಬಗ್ಗೆ ದ್ವೇಷ ಮತ್ತು ಅವಿಶ್ವಾಸವಿದೆ. ಅನ್ಯಾಯದ ಕುರಿತು ಇರುವ ಆಕ್ರೋಶದಿಂದ ಸಮಾಜದಲ್ಲಿನ ಜನರು ಅಸಮಾಧಾನಗೊಂಡಿದ್ದಾರೆ. ಅವರನ್ನು ಜೊತೆಗೆ ಸೇರಿಸಿಕೊಳ್ಳಬೇಕು.

೨. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಇದು ಅನಿವಾರ್ಯ ಪ್ರಕ್ರಿಯೆ ಆಗಿದೆ. ಇದರಲ್ಲಿ ಎರಡು ಪಕ್ಷ ಇರುವುದರಿಂದ ಸ್ಪರ್ಧೆ ಇರಲೇಬೇಕು; ಆದರೆ ಇದು ಯುದ್ಧವಲ್ಲ. ಪ್ರಚಾರದ ಸಮಯದಲ್ಲಿ ಯಾವ ರೀತಿಯಿಂದ ಟೀಕೆಗಳಾಗಿವೆ, ಅದರಿಂದ ಸಮಾಜದಲ್ಲಿ ದ್ವೇಷ ನಿರ್ಮಾಣ ಮಾಡುವ ಪ್ರಯತ್ನ ಆಗಿದೆ. ಈಗ ಸರಕಾರ ಸ್ಥಾಪನೆ ಆಗಿದೆ. ಈಗ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಾಗಿ ಆಡಳಿತಾರೂಢ ಮತ್ತು ವಿರೋಧಿಪಕ್ಷಗಳ ಒಪ್ಪಿಗೆ ಇಂದ ರಾಜಕಾರಣದ ಮೇಲೆ ಗಮನ ಇರಿಸಬೇಕು ಎಂದು ಹೇಳಿದರು.