ಜಮ್ಮುವಿನ ಬಸ್ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಭಯೋತ್ಪಾದರ ಕೈವಾಡ!

ಜಮ್ಮುವಿನಲ್ಲಿ ಹಿಂದೂ ಭಕ್ತರ ಮೇಲಿನ ದಾಳಿಯ ಪ್ರಕರಣ

ಜಮ್ಮು – ಇಲ್ಲಿಯ ರಿಯಾಸಿ ಪ್ರದೇಶದಲ್ಲಿ ಶ್ರೀ ವೈಷ್ಣೋದೇವಿ ದೇವಸ್ಥಾನದ ಕಡೆಗೆ ಹೋಗುವ ಹಿಂದೂ ಭಕ್ತರ ಬಸ್ಸಿನ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ೭ ಭಕ್ತರು, ಓರ್ವ ಬಸ್ ಚಾಲಕನು ಮತ್ತು ಬಸ್ ಕಂಡಕ್ಟರ್ ಇವರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರು ಬಸ್ ಚಾಲಕನ ಮೇಲೆ ಗುಂಡಿನ ದಾಳಿಯ ಮಾಡಿದ್ದರಿಂದ ವಾಹನದ ಮೇಲಿನ ಅವನ ಹಿಡಿತ ತಪ್ಪಿ ಬಸ್ಸು ಕಣಿವೆಯಲ್ಲಿ ಉರುಳಿತು. ಅದರ ನಂತರ ಕೂಡ ಭಯೋತ್ಪಾದಕರು ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ೩೦ ರಿಂದ ೪೦ ಗುಂಡುಗಳು ಹಾರಿಸಿದ್ದರು. ಇದರಿಂದ ಬಸ್ಸಿನಲ್ಲಿ ಗಾಯಗೊಂಡಿರುವ ನಾಗರಿಕರು ಅಲುಗಾಡದೆ ಬಿದ್ದಿದ್ದರು. ಇಬ್ಬರೂ ಭಯೋತ್ಪಾದಕರು ಪಾಕಿಸ್ತಾನಿಗಳಾಗಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ ಈ ಭಯೋತ್ಪಾದಕ ದಾಳಿಯ ಹಿಂದೆ ಅಬು ಹಮಾಜಾ ಈ ಭಯೋತ್ಪಾದಕನ ಕೈವಾಡವಿದ್ದು ಅವನ ಹುಡುಕಾಟ ನಡೆಯುತ್ತಿದೆ.

ಬಸ್‌ನಲ್ಲಿ ಉತ್ತರಪ್ರದೇಶ, ದೆಹಲಿ ಮತ್ತು ರಾಜಸ್ಥಾನ ಇಲ್ಲಿಯ ಭಕ್ತರ ಸಮಾವೇಶ

ಯಾವ ಬಸ್ಸಿನ ಮೇಲೆ ದಾಳಿ ನಡೆದಿದೆ, ಅದರಲ್ಲಿ ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನ ರಾಜ್ಯದಲ್ಲಿನ ಭಕ್ತರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸರಕಾರದಿಂದ ಸಾವನ್ನಪ್ಪಿರುವ ಸಂಬಂಧಿಕರಿಗೆ ಪರಿಹಾರವೆಂದು ೧೦ ಲಕ್ಷ ರೂಪಾಯಿ, ಗಾಯಗೊಂಡವರಿಗೆ ೫೦ ಸಾವಿರ ರೂಪಾಯಿ ನೀಡುವರೆಂದು ಘೋಷಿಸಿದೆ.

ರಾಷ್ಟ್ರೀಯ ತನಿಖಾದಳದಿಂದ ತನಿಖೆ !

ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಖಾ ದಳಕ್ಕೆ (ಎನ್.ಐ.ಎ.ಗೆ) ಒಪ್ಪಿಸಲಾಗಿದೆ. ಡ್ರೋನ್ ಮೂಲಕ ಘಟನಾ ಸ್ಥಳದ ಸಮೀಕ್ಷೆ ಮಾಡಲಾಗುತ್ತಿದೆ. ವಿಧಿ ವೈಜ್ಞಾನಿಕ ತಂಡ ಘಟನ ಸ್ಥಳಕ್ಕೆ ತಲುಪಿದೆ.

ಬಸ್ಸಿನಲ್ಲಿ ಸತ್ತಂತೆ ನಟಿಸಿದ್ದರಿಂದ ಬದುಕಿದೆವು ! – ಪ್ರಯಾಣಿಸುತ್ತಿದ್ದ ಭಕ್ತರು

ಬಸ್ಸಿನಲ್ಲಿ ಪ್ರವಾಸಿಸುತ್ತಿದ್ದ ಭಕ್ತರು, ನಮ್ಮ ಬಸ್ಸು ಕಣಿವೆಗೆ ಬಿದ್ದ ನಂತರ ಕೂಡ ಭಯೋತ್ಪಾದಕರು ಬಸ್ಸಿನ ಮೇಲೆ ಗುಂಡಿನ ದಾಳಿ ಮುಂದುವರೆಸಿದ್ದರು. ಅವರು ನಡುನಡುವೆ ನಿಲ್ಲಿಸಿ ನಮ್ಮ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರು. ಆದ್ದರಿಂದ ನಾವು ಬಸ್ಸಿನಲ್ಲಿ ಸತ್ತಿರುವ ಹಾಗೆ ನಾಟಕ ಮಾಡ ಬೇಕಾಯಿತು. ಭಯೋತ್ಪಾದಕರು ಸುಮಾರು ೨೦ ನಿಮಿಷ ಗುಂಡಿನ ದಾಳಿ ನಡೆಸಿದರು. ೩೦ ನಿಮಿಷದ ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದರು ಮತ್ತು ಅವರು ನಮ್ಮನ್ನು ಹೊರತೆಗೆದರು ಎಂದು ಹೇಳಿದರು.
ಇನ್ನೋರ್ವ ಭಕ್ತರು, ಅಲ್ಲಿ ೬ – ೭ ಭಯೋತ್ಪಾದಕರು ಇದ್ದರು. ಅವರು ಮಾಸ್ಕ್ ನಿಂದ ಮುಖ ಮುಚ್ಚಿಕೊಂಡಿದ್ದರು. ಆರಂಭದಲ್ಲಿ ಅವರು ರಸ್ತೆಯಲ್ಲಿ ಬಸ್ಸನ್ನು ಸುತ್ತುವರೆದರು ಮತ್ತು ಗುಂಡಿನ ದಾಳಿ ನಡೆಸಿದರು. ಬಸ್ಸು ಕಣಿವೆಗೆ ಬಿದ್ದ ನಂತರ ಅವರು ಬಸ್ಸಿನ ಕಡೆಗೆ ಕೆಳಗೆ ಬಂದರು ಮತ್ತು ಎಲ್ಲಾ ಜನರು ಹತರಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಗುಂಡಿನ ದಾಳಿ ಮುಂದುವರೆಸಿದರು. ನಾವು ಮೌನವಾಗಿ ಇದ್ದೆವು ಎಂದು ಹೇಳಿದರು.

ದಾಳಿಯ ಹೊಣೆಹೊತ್ತ ‘ದ ರೆಸಿಪ್ಟನ್ಸ ಫ್ರಂಟ್’ !

ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ಲಷ್ಕರ್ ಏ ತೋಯ್ಬ್ ಶಾಖೆ ಆದ ‘ದ ರೆಸಿಸ್ಟನ್ಸ್ ಫ್ರಂಟ್’ ಈ ಜಿಹಾದಿ ಭಯೋತ್ಪಾದಕ ಸಂಘಟನೆ ಸ್ವೀಕರಿಸಿದೆ. ಈ ಸಂಘಟನೆಗೆ ಪಾಕಿಸ್ತಾನದ ಬೆಂಬಲ ಇದೆ. ಈ ಸಂಘಟನೆಯ ಭಯೋತ್ಪಾದಕರು ಘಟನೆ ಘಟಿಸಿದಾಗ, ಹತ್ತಿರದ ಕಾಡಿನಲ್ಲಿ ಅಡಿಗಿ ಕುಳಿತಿದ್ದರು ಮತ್ತು ಅನಿರೀಕ್ಷಿತವಾಗಿ ಅವರು ಬಸ್ಸಿನ ಎದುರಿಗೆ ಬಂದು ಗುಂಡಿನ ದಾಳಿ ನಡೆಸಿದರು.

ಸಂಪಾದಕೀಯ ನಿಲುವು

ಕಳೆದ ೩೪ ವರ್ಷದಲ್ಲಿ ಪಾಕಿಸ್ತಾನ ಭಾರತದಲ್ಲಿ, ವಿಶೇಷವಾಗಿ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದೆ, ಇದು ಬಹಿರಂಗವಾಗಿದ್ದರೂ ಭಾರತವು ಪಾಕಿಸ್ತಾನಕ್ಕೆ ಶಾಶ್ವತವಾದ ಪಾಠ ಕಲಿಸಲೇ ಇಲ್ಲ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಸರಕಾರಕ್ಕೆ ಲಚ್ಚಾಸ್ಪದ !

ಈ ದಾಳಿಗಳು ಹಿಂದುಗಳ ಮೇಲೆ ಆಗುತ್ತಿದ್ದು ಹಿಂದುಗಳು ಈ ಸಂದರ್ಭದಲ್ಲಿ ಸರಕಾರದ ಮೇಲೆ ಎಂದೂ ಒತ್ತಡ ತರದೆ ಇರುವುದರಿಂದ ಈ ಪರಿಸ್ಥಿತಿಯು ಹಾಗೆ ಶಾಶ್ವತವಾಗಿ ಮುಂದುವರೆಯುವುದು, ಹೇಗೆ ಹೇಳಿದರೆ ತಪ್ಪಾಗಲಾರದು ! ಆದರೆ ಈ ಪರಿಸ್ಥಿತಿ ಬದಲಾಯಿಸಬೇಕಾಗಿದ್ದರೆ, ಹಿಂದುಗಳು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ತರುವುದು ಆವಶ್ಯಕವಾಗಿದೆ !

ಈ ಹಿಂದೆ ಕೂಡ ಭಯೋತ್ಪಾದಕರು ಹಿಂದೂ ಭಕ್ತರನ್ನು ಗುರಿ ಮಾಡಿ ಅನೇಕ ಅಮಾಯಕ ಹಿಂದುಗಳ ಹತ್ಯೆ ಮಾಡಿದ್ದರು. ಈ ದಾಳಿಯಿಂದ ಸರಕಾರವು ಎಂದಿಗೂ ಪಾಠ ಕಲಿತಿಲ್ಲವೇ ? ಜಮ್ಮು ಕಾಶ್ಮೀರದಲ್ಲಿ ಹಿಂದುಗಳ ಮೇಲಿನ ಆಪತ್ತು ನೋಡಿದರೆ ಇಂತಹ ಬಸ್ಸುಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರು ಏಕೆ ಇರುವುದಿಲ್ಲ ? ಇದರ ಉತ್ತರ ಹಿಂದುಗಳಿಗೆ ದೊರೆಯಲೇಬೇಕು ?