Oxford University To Return Statue : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಹಿಂದೂ ಸಂತರ 500 ವರ್ಷಗಳ ಹಳೆಯ ಮೂರ್ತಿ ಭಾರತಕ್ಕೆ ಹಿಂತಿರುಗಿಸಲಿದೆ !

ಕಳ್ಳಸಾಗಣೆದಾರರು ಭಾರತದ ದೇವಸ್ಥಾನಗಳಿಂದ ಮೂರ್ತಿಗಳನ್ನು ಕದ್ದಿದ್ದರು !

ಲಂಡನ – ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು, ದಕ್ಷಿಣ ಭಾರತದ ತಮಿಳು ಕವಿ ಸಂತ ತಿರುಮನಕಾಯಿ ಆಳ್ವಾರ್ ಅವರ 500 ವರ್ಷಗಳಷ್ಟು ಹಳೆಯದಾದ ಪ್ರತಿಮೆಯನ್ನು ಭಾರತಕ್ಕೆ ಹಿಂತಿರುಗಿಸುವುದಾಗಿ ಘೋಷಿಸಿದೆ. ಈ ಮೂರ್ತಿಯ ಎತ್ತರ 60 ಸೆಂ.ಮೀ ಆಗಿದ್ದು, ಅದು ಕಂಚಿನದ್ದಾಗಿದೆ. ಪ್ರಸ್ತುತ ಈ ಮೂರ್ತಿಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಶ್ಮೋಲಿಯನ್ ಸಂಗ್ರಹಾಲಯದಲ್ಲಿದೆ.

1. ಸಂತ ತಿರುಮನಕಾಯಿ ಆಳ್ವಾರ ಇವರ 16 ನೇ ಶತಮಾನದ ಮೂರ್ತಿಯನ್ನು ಹಿಂತಿರುಗಿಸುತ್ತಿರುವುದಾಗಿ ಬ್ರಿಟನ್‌ನಲ್ಲಿರುವ ಭಾರತೀಯ ಉಚ್ಚಾಯುಕ್ತಾಲಯದಿಂದ ಹೇಳಲಾಗಿದೆ. ಕಳ್ಳಸಾಗಾಣಿಕೆದಾರರು ಈ ಮೂರ್ತಿಯನ್ನು ಭಾರತೀಯ ದೇವಸ್ಥಾನದಿಂದ ಕಳ್ಳತನ ಮಾಡಿರಬೇಕು ಎಂದು ಅವರು ಅಂದಾಜು ವ್ಯಕ್ತಪಡಿಸಿದ್ದಾರೆ.

2. ಮಾರ್ಚ್ 11, 2024 ರಂದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ `ಕೌನ್ಸಿಲ್’ ಅಶ್ಮೋಲಿಯನ್ ಸಂಗ್ರಹಾಲಯದಿಂದ ಸಂತ ತಿರುಮನಕಾಯಿ ಆಳ್ವಾರ್ ಅವರ 16 ನೇ ಶತಮಾನದ ಕಂಚಿನ ಮೂರ್ತಿಯನ್ನು ಹಿಂತಿರುಗಿಸುತ್ತಿರುವುದಾಗಿ ಭಾರತೀಯ ಉಚ್ಚಾಯುಕ್ತಾಲಯದ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಕೊಹಿನೂರ್ ವಜ್ರವನ್ನೂ ಮರಳಿಸುವಂತೆ ಭಾರತದಿಂದ ಬೇಡಿಕೆ !

1849 ರಲ್ಲಿ ಎರಡನೇ ಆಂಗ್ಲೋ-ಸಿಖ್ ಯುದ್ಧದಲ್ಲಿ ವಿಜಯದ ನಂತರ, ಉತ್ತರ ಭಾರತದ ಪಂಜಾಬನಿಂದ ಕೋಹಿನೂರ್ ವಜ್ರವನ್ನು ‘ಈಸ್ಟ್ ಇಂಡಿಯಾ ಕಂಪನಿ’ ಕದ್ದಿತ್ತು. ಈ ವಜ್ರವನ್ನು ರಾಣಿ ವಿಕ್ಟೋರಿಯಾಗೆ ನೀಡಲಾಗಿತ್ತು ಮತ್ತು ಅಂದಿನಿಂದ ಅದು ಲಂಡನ್ ಟವರ್‌ನಲ್ಲಿರುವ ‘ಜ್ಯುವೆಲ್ ಹೌಸ್’ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಭಾರತ ಈ ವಜ್ರದ ನಿಜವಾದ ವಾರಸುದಾರನೆಂದು ಭಾರತ ಸರಕಾರವು ಅನೇಕ ದಾವೆಗಳನ್ನು ಮಾಡಿದೆ. 1947 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದ ನಂತರ, ಭಾರತವು ಕೊಹಿನೂರ್ ವಜ್ರವನ್ನು ಹಿಂತಿರುಗಿಸುವಂತೆ ಆಗಾಗ್ಗೆ ಕೋರಿತ್ತು. ಇದನ್ನು ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸರಕಾರಗಳು ಕೂಡ ತಾವು ಈ ವಜ್ರದ ವಾರಸುದಾರರು ಎಂದು ದಾವೆ ಮಾಡಿದೆ.